ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕದ ಮಾನ ಮರ್ಯಾದೆ ಹರಾಜು- ಆರ್. ಅಶೋಕ್ ಕಿಡಿ (Video)
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸಿದ ಸ್ಥಳಕ್ಕೆ ಕೇರಳ ನಿಯೋಗ ಭೇಟಿ ನೀಡಲು ಅವಕಾಶ ಮಾಡಿಕೊಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ಕೇರಳ ಸರ್ಕಾರದ ಮುಂದೆ ತಲೆ ತಗ್ಗಿಸಿ ನಿಂತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದರು.
ಕಾಪುವಿನ ಮಂಥನ ರೆಸಾರ್ಟ್ನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ವಲಸಿಗರನ್ನು ತೆರವು ಮಾಡಿರುವುದಕ್ಕೆ ಚಕಾರವೆತ್ತಿರುವ ಕೇರಳ ಸರ್ಕಾರ ನಿಯೋಗವನ್ನು ಕಳುಹಿಸಿದೆ. ಅವರನ್ನು ರಾಜ್ಯಕ್ಕೆ ಆಗಮಿಸಲು ಯಾಕೆ ಬಿಟ್ಟಿದ್ದೀರಿ ಎಂದು ರಾಜ್ಯಸಕಾರವನ್ನು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಕೇರಳಕ್ಕೆ ಶರಣಾದಂತಿದೆ. ಕೇರಳದ ಮುಂದೆ ತಲೆತಗ್ಗಿಸಿ ನಿಂತಿದೆ. ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಮಾನ ಮರ್ಯಾದೆ ಹರಾಜು ಹಾಕಿದೆ ಎಂದು ಕಿಡಿ ಕಾರಿದರು.
ಕೇರಳದ ಮುಖ್ಯಮಂತ್ರಿ ಪಿಣರಾಯಿ ಅವರು ಬೆಂಗಳೂರಿನ ಮುಸ್ಲಿಂ ವಲಸಿಗರನ್ನು ತೆರವು ಮಾಡಿರುವುದಕ್ಕೆ ಟ್ವೀಟ್ ಮಾಡಿ ಮುಸ್ಲಿಮರಿಗೆ ಅನ್ಯಾಯ ವಾಗಿದೆ ಎನ್ನುತ್ತಾರೆ. ಆದರೆ ಬಾಂಗ್ಲಾ ಹಿಂದೂಗಳ ಹತ್ಯೆ ಆಗಿರುವ ಬಗ್ಗೆ ಚಕಾರ ಎತ್ತಿಲ್ಲ. ಅವರ ಬಗ್ಗೆ ಕರುಣೆ ಇಲ್ಲದ ಪಿಣರಾಯಿ ಅಕ್ರಮ ವಲಸಿಗರ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ಅಲ್ಪಸಂಖ್ಯಾತ ಓಟು ಗಮನದಲ್ಲಿಟ್ಟುಕೊಂಡು ಪಿಣರಾಯಿ ಹಾಗೂ ಸಿದ್ದರಾಮಯ್ಯ ಅವರು ಮಾಡುತ್ತಿರುವ ಓಟು ಪಾಲಿಟಿಕ್ಸ್ ಇದು. ಕರ್ನಾಟಕ ಸರ್ಕಾರವನ್ನು ಕೇರಳ ಸರ್ಕಾರ ರೂಲ್ ಮಾಡುತ್ತಿದೆಯಾ ಎಂದು ಪ್ರಶ್ನಿಸಿದರು.
ಬೆಂಗಳೂರುನಲ್ಲಿ ಕೆರೆ ಒತ್ತುವರಿ ರಾಜ ಕಾಲುವೆ ಒತ್ತುವರಿ ಮಾಡಿದವರಿಗೆ ಬೀದಿಗೆ ಹಾಕಿದ್ದೀರಿ ಅವರ ಬಗ್ಗೆ ಕಾಳಜಿ ಇಲ್ಲದ ನೀವು ಅಕ್ರಮ ವಲಸಿಗರಿಗೆ ಪರ್ಯಾಯ ಜಾಗ ಕೊಡುತ್ತೇವೆ ಎನ್ನುತ್ತಿದ್ದಾರೆ. ರಾಜ್ಯಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದರು.