-->
ಜ.3ರಂದು ಸೂಪರ್ ಮೂನ್; ಖಗೋಳದಲ್ಲಿ ಸೂರ್ಯ- ಚಂದ್ರ ಸಂಗಮ

ಜ.3ರಂದು ಸೂಪರ್ ಮೂನ್; ಖಗೋಳದಲ್ಲಿ ಸೂರ್ಯ- ಚಂದ್ರ ಸಂಗಮ


ಜನವರಿ 3ರಂದು ಭೂಮಿಗೆ ಸೂರ್ಯ ಚಂದ್ರರ ಬಲು ಅಪರೂಪದ ಸಂಗಮವಾಗಲಿದೆ. ಅತೀ ವಿರಳವಾಗಿರುವ ಈ ಸಂಗಮ ಖಗೋಳದಲ್ಲಿ ವಿಶೇಷ ದಿನ. ಈ ದಿನ ಸೂರ್ಯನು ಸುಮಾರು 30 ಲಕ್ಷ ಕಿಮೀ ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಕಾಣುವುದು. ಚಂದ್ರ ಕೂಡಾ ಸುಮಾರು 27 ಸಾವಿರ ಕಿ.ಮೀ ಸಮೀಪ ಬಂದು ದೊಡ್ಡದಾಗಿ ಕಾಣುವುದು. ಒಂದೇ ದಿನ ಈ ಎರಡು ಕೌತುಕ ನಡೆಯುತ್ತಿರುವುದು ವಿಶೇಷ.


ಜನವರಿ 3ರಂದು ಹುಣ್ಣಿಮೆ ಹಾಗೂ ಸೂಪರ್ ಮೂನ್ ಇದು 2026 ರ ಪ್ರಥಮ ಸೂಪರ್ ಮೂನ್. ಸೂಪರ್ಮೂನ್‌ನಿಂದಾಗಿ ಹುಣ್ಣಿಮೆಯ ಚಂದ್ರ ಭೂಮಿಗೆ ಸುಮಾರು 27000 ಕಿಮೀ ಸಮೀಪ ಬಂದು 14 ಅಂಶ ದೊಡ್ಡದಾಗಿ, ಸುಮಾರು 30ಅಂಶ ಹೆಚ್ಚಿನ ಹುಣ್ಣಿಮೆಯ ಬೆಳ್ಳಂ ಬೆಳಕಿಂದ ಬೆಳಗುತ್ತದೆ.

ಸೂರ್ಯನಲ್ಲೂ ವರ್ಷದ ವಿಶೇಷ ದಿನ. ಸೂರ್ಯನ ಸುತ್ತ ತಿರುಗುವ ಭೂಮಿಯ ದೀರ್ಘ ವೃತ್ತದ ಕಾರಣದಿಂದ ಜನವರಿ 3ರಂದು ಸಮೀಪ ದೂರ ಭೂಮಿ ಬಂದು, ಸರಾಸರಿ ದೂರ 15 ಕೋಟಿ ಕಿ.ಮೀ ಕ್ಕಿಂತ 14 ಕೋಟಿ 70 ಲಕ್ಷ ಕಿಮೀ ಗೆ ಬರಲಿದೆ. ಇದರಿಂದ ಸೂರ್ಯ ಮಾಮೂಲಿಗಿಂತ ಭೂಮಿಗೆ ಸಮೀಪ ಬರಲಿದೆ. ಹಾಗಾಗಿ ಸೂರ್ಯ ಮಾಮೂಲಿಗಿಂತ ದೊಡ್ಡದಾಗಿ ಕಾಣುವುದು.

ಈ ವರ್ಷ ಭೂಮಿ ಜನವರಿ 3 ಪೆರಿಜಿಗೆ ಬರುವುದು, ಜುಲೈ  6ರಂದು ಅಪೊಜಿಗೆ ಬರುವುದು. ಸೂರ್ಯ ಸುತ್ತ ತಿರುಗುವ ಭೂಮಿ ಹಾಗೂ ಭೂಮಿಯ ಸುತ್ತ ತಿರುಗುವ ಚಂದ್ರ ಪಥ ವರ್ತುಲವಲ್ಲದೇ ದೀರ್ಘ ವೃತ್ತಾಕಾರವಾಗಿರುವುದು ಈ ಎಲ್ಲ ಸುಂದರ ಖಗೋಳ ವಿದ್ಯಾಮಾನಗಳಿಗೆ ಕಾರಣ ಎಂದು ಉಡುಪಿಯ ಖಗೋಳ ಶಾಸ್ತ್ರಜ್ಞ, ವಿಜ್ಞಾನಿ ಡಾ.ಎ.ಪಿ. ಭಟ್ ತಿಳಿಸಿದ್ದಾರೆ. 





Ads on article

Advertise in articles 1

advertising articles 2

Advertise under the article