ನಡೂರು ಹೈಸ್ಕೂಲ್ ಸಮೀಪ ಚಿರತೆ ಓಡಾಟ: ಗ್ರಾಮಸ್ಥರಲ್ಲಿ ಆತಂಕ
Monday, January 26, 2026
ಉಡುಪಿ ಜಿಲ್ಲೆಯ ನಡೂರು ಹೈಸ್ಕೂಲ್ ಹತ್ತಿರದ ಪುಟ್ಟಯ್ಯ ಶೆಟ್ಟಿ ಎಂಬವರ ಮನೆಯ ಆವರಣದಲ್ಲಿ ಚಿರತೆ ಸಂಚರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.
ನಡೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಇತ್ತೀಚೆಗೆ ಚಿರತೆಗಳ ಕಾಟ ಹೆಚ್ಚಾಗುತ್ತಿದ್ದು, ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಹೊರಗೆ ತಿರುಗಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
