ವಿದ್ಯುತ್ ತಂತಿಗೆ ಗ್ಯಾಸ್ ಬಲೂನ್ ತಗುಲಿ ಶಾರ್ಟ್ ಸರ್ಕ್ಯೂಟ್: ಕಾರು ಸುಟ್ಟು ಭಸ್ಮ
Monday, January 19, 2026
ವಿದ್ಯುತ್ ತಂತಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನ ಬೆಂಕಿಯಿOದಾಗಿ ಕಾರೊಂದು ಸುಟ್ಟು ಭಸ್ಮವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪಡುಮಲೆ ಸಮೀಪ ನಡೆದಿದೆ.
ಬಡಗನ್ನೂರು ಗ್ರಾಮ ಪಂಚಾಯತ್‌ನ ಪಡುಮಲೆ ಪ್ರದೇಶದ ಮೈಂದಿನಡಕದಲ್ಲಿರುವ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಳಿ ಅವಘಡ ಉಂಟಾಗಿದೆ.
ದೇವಾಲಯದಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿತ್ತು. ದೇವಾಲಯದ ಆವರಣದೊಳಗಿನ ವಿದ್ಯುತ್ ಕಂಬದ ಬಳಿ ಕಾರು ನಿಲ್ಲಿಸಲಾಗಿತ್ತು. ಹತ್ತಿರದ ಜಾತ್ರೆಯಿಂದ ಬಂದ ಗ್ಯಾಸ್ ಬಲೂನ್ ಬಲವಾದ ಗಾಳಿಯಿಂದ ಹಾರಿಹೋಗಿ ಮೇಲಿನ ವಿದ್ಯುತ್ ತಂತಿಗೆ ತಗುಲಿ ಬೆಂಕಿಯ ಕಿಡಿ ಕಾರಿಗೆ ಸ್ಪರ್ಶಿಸಿದೆ.
ಬಲೂನ್ ತಂತಿಯನ್ನು ಸ್ಪರ್ಶಿಸಿದ ತಕ್ಷಣ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅವಘಡ ಸಂಭವಿಸಿದೆ. ನಿವಾಸಿಗಳು ಸೇರಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಕಾರು ಭಾಗಶಃ ಹಾನಿಗೊಳಗಾಗಿದೆ.