ಬಹುಮುಖ ಪ್ರತಿಭೆ ಸ್ವಾತಿ ಆರ್ಟ್ಸ್ ನ ಸತೀಶ್ ಆತ್ಮಹತ್ಯೆ
Sunday, January 25, 2026
ಬಹುಮುಖ ಪ್ರತಿಭೆ ಸ್ವಾತಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಹಲವು ವರ್ಷಗಳಿಂದ ಸೃಜನಶೀಲ ಮತ್ತು ಲಲಿತಕಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸ್ವಾತಿ ಸತೀಶ್ ಎಂದೇ ಚಿರಪರಿಚಿತರಾಗಿರುವ ಮುಡಿಪು ನಿವಾಸಿ ಸತೀಶ್ (49) ಅವರು ನಿಧನರಾಗಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಮನನೊಂದಿದ್ದ ಅವರು ಮುಡಿಪುವಿನ ಮಿತ್ತಬಾರೆ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರಕಲೆ ಅಥವಾ ಸಂಗೀತದಲ್ಲಿ ಯಾವುದೇ ಔಪಚಾರಿಕ ತರಬೇತಿ ಪಡೆಯದಿದ್ದರೂ, ಸ್ವಯಂ ಆಸಕ್ತಿಯಿಂದ ಈ ಎರಡನ್ನೂ ಕಲಿತು, ಅವುಗಳನ್ನೇ ತಮ್ಮ ವೃತ್ತಿ ಮತ್ತು ಜೀವನೋಪಾಯವನ್ನಾಗಿ ಮಾಡಿಕೊಂಡಿದ್ದರು. ನುರಿತ ಕೀ ಬೋರ್ಡ್ ವಾದಕರಾಗಿದ್ದ ಸತೀಶ್ ಅವರು ನೂರಾರು ಕಾರ್ಯಕ್ರಮಗಳಿಗೆ ಸಂಗೀತ ಪಕ್ಕ ವಾದ್ಯ ಒದಗಿಸಿದ್ದರು.