ಅಮ್ಮುಂಜೆ ದೇವಾಲಯ ನಿಧಿಕುಂಭಕ್ಕೆ ಚಾಲನೆ, ವಿಜ್ಞಾಪನಾ ಪತ್ರ ಬಿಡುಗಡೆ
Monday, January 05, 2026
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಅಮ್ಮುಂಜೆ ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಜೀರ್ಣೋದ್ಧಾರ ನಿಧಿಗೆ ಸಂಗ್ರಹಕ್ಕೆ ಚಾಲನೆ ನೀಡುವ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಮಾಡುವ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಪೊಳಲಿ ದೇವಸ್ಥಾನದ ಆಡಳಿತ ಮೊಕೇಸರ ಡಾ. ಎ. ಮಂಜಯ್ಯ ಶೆಟ್ಟಿ ಅವರು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನಿಧಿ ಕುಂಭಕ್ಕೆ ಚಾಲನೆ ನೀಡಿ, ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಅಮ್ಮುಂಜೆ ಗುತ್ತು ಸೋಮಶೇಖರ ಶೆಟ್ಟಿ, ಆಡಳಿತ ಮೊಕೇಸರರಾದ ನಾಗೇಶ್ ರಾವ್, ಸುದೇಶ್ ಕುಮಾರ್ ರೈ, ಉದ್ಯಮಿ ಉಮೇಶ್ ಸಾಲ್ಯಾನ್, ರಾಧಾಕೃಷ್ಣ ತಂತ್ರಿ ಪೊಳಲಿ, ಕ್ಷೇತ್ರದ ಅರ್ಚಕ ಶಶಿಧರ್ ಭಟ್, ಚಂದ್ರಶೇಖರ ಭಂಡಾರಿ, ಜನಾರ್ಧನ ಕನ್ಯಾಬೆಟ್ಟು, ವಿಜಯ್ ಸುವರ್ಣ, ಜನಾರ್ಧನ ಅಮ್ಮುಂಜೆ, ಉದಯ್, ಹರೀಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
.jpeg)