ಮಾಜಿ ತಾ.ಪಂ ಸದಸ್ಯ ಉದಯ ಶೆಟ್ಟಿ ಕನ್ಯಾನ ನಿಧನ
Wednesday, January 28, 2026
ಉಡುಪಿ ಜಿಲ್ಲೆಯ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ, ಸಮಾಜ ಸೇವಕ ಉದಯ ಶೆಟ್ಟಿ ಕನ್ಯಾನ ಅವರು ಇಂದು ನಿಧನರಾಗಿದ್ದಾರೆ.
ಉಡುಪಿ ಜಿಲ್ಲೆಯ ಶಿರ್ವ ಮೂಲದವರಾಗಿದ್ದ ಉದಯ ಶೆಟ್ಟಿ, ಸ್ಥಳೀಯವಾಗಿ ಸಾಮಾಜಿಕ ಹಾಗೂ ರಾಜಕೀಯ ರಂಗಗಳಲ್ಲಿ ಸಕ್ರಿಯರಾಗಿದ್ದರು. ಕಂಬಳ ಪ್ರೇಮಿಯಾಗಿದ್ದ ಅವರು ಕಟಪಾಡಿ ಮೂಡು ಪಡು ಜೋಡುಕರೆ ಕಂಬಳ ಸಮಿತಿಯ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.