-->
 ಹಿರಿಯ ಕ್ರೀಡಾಪಟು ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ (Video)

ಹಿರಿಯ ಕ್ರೀಡಾಪಟು ಸಂಜೀವ ಬಳ್ಕೂರ್ ಅವರಿಗೆ ಅಭಿನಂದನೆ (Video)


ಮಾಸ್ಟರ್ ಅಥ್ಲೆಟಿಕ್ಸ್ ಮತ್ತು ಮ್ಯಾರಥಾನ್ ಓಟಗಳಲ್ಲಿ  ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು  ಗೆದ್ದು ಜನವರಿ 18ರಂದು ಟಾಟಾ ಮುಂಬೈ ನಡೆಸಿದ ದೇಶ ಮಟ್ಟದಲ್ಲಿ ಅತ್ಯುನ್ನತ ಹೆಸರಾಂತ ಮ್ಯಾರಥಾನ್ ನಲ್ಲಿ ಭಾಗವಹಿಸಿ ನಾಲ್ಕು ಗಂಟೆ 56 ನಿಮಿಷದಲ್ಲಿ 42 ಕಿ.ಮೀ ಓಡಿ ಸಾಧನೆ ಮಾಡಿದ ಹಿರಿಯ ಕ್ರೀಡಾಪಟು ಸಂಜೀವ ಬಳ್ಕೂರು ಅವರನ್ನು ಅಜ್ಜರ ಕಾಡು ಸರಕಾರಿ ಜಿಮ್ಮಿನಲ್ಲಿ ಅಭಿನಂದಿಸಲಾಯಿತು.


ಜಿಮ್ಮಿನ ತರಬೇತುದಾರಾದ ಉಮೇಶ್ ಮಟ್ಟು ಅವರು ಎಲ್ಲಾ ಸದಸ್ಯರ ಪರವಾಗಿ ಸಂಜೀವ ಬಳ್ಕೂರು ಇವರನ್ನು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಜಿಮ್ಮಿನ ತರಬೇತುದಾರರಾದ ಉಮೇಶ್ ಮಟ್ಟು ಅವರು, ಸಂಜೀವ ಬಳ್ಕೂರು ಅವರು ಈ ಅಪೂರ್ವ ಸಾಧನೆ ಮಾಡಿ ಜಿಮ್ಮಿನ ಬಲಾಢ್ಯ ವ್ಯಕ್ತಿ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.

ಸಂಜೀವ ಬಳ್ಕೂರು ಮಾತನಾಡಿ, ಆಧುನಿಕ ಆಹಾರ ಪದ್ಧತಿಯಿಂದ ಎಲ್ಲರಿಗೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತವೆ. ಯಾವುದೇ ರೀತಿಯ ಸಮಸ್ಯೆಗಳಿಗೆ ಎಡೆ ಮಾಡಿಕೊಡದೆ ಒಗ್ಗಟ್ಟಿನಿಂದ ನಡೆದುಕೊಳ್ಳಬೇಕು. ಸರಕಾರದಿಂದ ನಡೆಸಲ್ಪಡುವ ಈ ಜಿಮ್ ಅತ್ಯುನ್ನತ ಕ್ರೀಡೋಪಕರಣವನ್ನು ಮತ್ತು ಅತ್ಯುನ್ನತ ತರಬೇತುದಾರರನ್ನು  ಹೊಂದಿದ್ದು  ಇದರ ಸದುಪಯೋಗವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಮ್ಮಿನ ಸದಸ್ಯರಾದ ಷ್ರಶಾಂತ್ ಕೋಟ್ಯಾನ್ ಮಲ್ಪೆ,  ಉದಯ್ ಕುಮಾರ್ ಕಲ್ಮಾಡಿ, ಷ್ರಶಾಂತ್ ಜತ್ತನ್, ಎಲ್‌ಐಸಿ ಯ ಹಿರಿಯ ಅಧಿಕಾರಿ ಆನಂದ್ ಮತ್ತು ದೀಪಕ್ ಕಾಮತ್,  ಸುಧಾಕರ್ ಬಿಜೂರು ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.




Ads on article

Advertise in articles 1

advertising articles 2

Advertise under the article