ಬೌನ್ಸರ್ ಗಳಿದ್ದ ಕಾರು ಪಲ್ಟಿ; ಓರ್ವ ಸಾವು, ನಾಲ್ಕು ಮಂದಿಗೆ ಗಾಯ
Wednesday, January 28, 2026
ಕೇರಳದ ಕೊಟ್ಟಾಯಂನ ಕಾರ್ಯಕ್ರಮವೊಂದಕ್ಕೆ ಬೌನ್ಸರ್ ಗಳಾಗಿ ತೆರಳುತ್ತಿದ್ದ ಕಾರೊಂದು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು ನಾಲ್ಕು ಜನ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೃತರನ್ನು ಮೂಲತಃ ಮುಲ್ಕಿ ತಾಲೂಕಿನ ಅಂಗಾರಗುಡ್ಡೆ ನಿವಾಸಿ ಪ್ರಸ್ತುತ ಕಾನ ಚಿರಾಗ್ ಫ್ಲಾಟ್ ನಲ್ಲಿ ವಾಸವಿರುವ ಶಾ ನವಾಝ್ ಯಾನೆ ಶಮೀಮ್ ಎಂದು ತಿಳಿದು ಬಂದಿದೆ. ಈತನ ಜೊತೆ ಕಾರಿನಲ್ಲಿ ಕಾಟಿಪಳ್ಳದ ಸಿರಾಜ್, ಕಾನ ನಿವಾಸಿಗಳಾದ ಅಶ್ಫಾಕ್, ಶಮೀಮ್, ಸೂರಿಂಜೆ ನಿವಾಸಿ ಶಬೀರ್ ಹಾಗೂ ರಾಜಸ್ಥಾನ ಮೂಲದ ವ್ಯಕ್ತಿ ಇದ್ದರು ಎಂದು ತಿಳಿದು ಬಂದಿದೆ.
ಇವರು ಮಂಗಳೂರಿನಿOದ ಕೇರಳದ ಕೊಟ್ಟಾಯಂ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಬೌನ್ಸರ್ ಗಳಾಗಿ ತೆರಳಿದ್ದರು. ಇಂದು ಬೆಳಗ್ಗೆ ಇಕ್ಕಟ್ಟಾದ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಸುಮಾರು 20ಅಡಿ ಆಳಕ್ಕೆ ಕಾರು ಬಿದ್ದಿದೆ ಎನ್ನಲಾಗಿದೆ.ಈ ವೇಳೆ ಕಾರಿನಲ್ಲಿದ್ದ ಶಾ ನವಾಝ್ ಸ್ಥಳದಲ್ಲೇ ಮೃತಪಟ್ಟಿದ್ದು, ಸಿರಾಜ್ ಗೆ ಗಂಭೀರ ಗಾಯಗಾಳಾಗಿದ್ದು, ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.