-->
 ಕೋಟ ಮೂಲದ ಹಿರಿಯ ವೈದ್ಯ ಡಾ. ಎಚ್.ವಿ. ಹಂದೆಗೆ ಪದ್ಮಶ್ರೀ

ಕೋಟ ಮೂಲದ ಹಿರಿಯ ವೈದ್ಯ ಡಾ. ಎಚ್.ವಿ. ಹಂದೆಗೆ ಪದ್ಮಶ್ರೀ


ಕೋಟ ಹಂದಟ್ಟಿನ ಪ್ರಸಿದ್ಧ ಹಂದೆ ಮನೆತನದ  99 ರ ಹಿರಿಯ ವೈದ್ಯ ಡಾ. ಎಚ್. ವಿ. ಹಂದೆ ಅವರಿಗೆ ವೈದ್ಯಕೀಯ ಕ್ಷೇತ್ರಕ್ಕಾಗಿ 2026 ರ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ಲಭಿಸಿದೆ.

ವೃತ್ತಿಯಲ್ಲಿ ವಕೀಲರಾಗಿದ್ದು, ಬ್ರಿಟಿಷ್ ಸರಕಾರದಲ್ಲಿ ಅಧಿಕಾರಿಯಾಗಿ ಗುರುತಿಸಿಕೊಂಡ   ಕೋಟದ ಮಾದಪ್ಪ ಹಂದೆ ಅವರ ಪುತ್ರ ಹೆಚ್. ವಿ. ಹಂದೆಯವರು ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್ ಅವರು ಮುಖ್ಯಮಂತ್ರಿ ಆಗಿದ್ದಾಗ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರು, ಚೆನ್ನೈ, ಕೊಯಮುತ್ತೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ ಹಂದೆಯವರು ತಮಿಳುನಾಡಿನ ಚೆನ್ನೈಯಲ್ಲಿಯೇ ಹಂದೆ ಆಸ್ಪತ್ರೆ ಸ್ಥಾಪಿಸಿ,  ವೈದ್ಯರಾಗಿ ಸೇವೆ ಸಲ್ಲಿಸಿದವರು.   ರಾಜಕೀಯದಲ್ಲಿ ಕುಶಲತೆಯನ್ನು ಸಾಧಿಸಿದ ಹಂದೆಯವರು ಮುಖ್ಯಮಂತ್ರಿ ಎಂಜಿಆರ್ ಅವರ ಅನಾರೋಗ್ಯ ಸಂದರ್ಭದಲ್ಲಿ ಸರಕಾರವನ್ನು ಮುನ್ನಡೆಸಿದವರು. ಕಂಬ ರಾಮಾಯಣವನ್ನು ಇಂಗ್ಲೀಷ್ ಹಾಗೂ ತಮಿಳಿಗೆ ಭಾಷಾಂತರಿಸಿದ ಹಂದೆ ಅವರು ಸಾಹಿತ್ಯ ವಲಯದಲ್ಲಿಯೂ ಗುರುತಿಸಿಕೊಂಡವರು. 


Ads on article

Advertise in articles 1

advertising articles 2

Advertise under the article