ಕಿದಿಯೂರು ಲಾರ್ಡ್ಸ್ ಇಂಟರ್ನ್ಯಾಷನಲ್ ಶಾಲೆ ವತಿಯಿಂದ ಪುತ್ತಿಗೆ ಶ್ರೀಪಾದರಿಗೆ ಗೌರವಾರ್ಪಣೆ
Sunday, January 25, 2026
ಉಡುಪಿಯ ನಿಟ್ಟೂರಿನಲ್ಲಿರುವ ಕಿದಿಯೂರು ಲಾರ್ಡ್ಸ್ ಇಂಟರ್ನ್ಯಾಷನಲ್ ಶಾಲೆಗೆ ಆಗಮಿಸಿದ ಪುತ್ತಿಗೆ ಶ್ರೀಪಾದರನ್ನು ಭವ್ಯವಾಗಿ ಸ್ವಾಗತಿಸಲಾಯಿತು.
ಶ್ರೀಪಾದರು ಶಾಲಾ ಆವರಣದಲ್ಲಿರುವ ನಾಗ ದೇವರಿಗೆ ಆರತಿಯನ್ನು ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತಿಗೆ ಶ್ರೀಪಾದರಿಗೆ ಶಾಲೆಯ ಮುಖ್ಯಸ್ಥರಾದ ಭುವನೇಂದ್ರ ಕಿದಿಯೂರು ಇವರು ಗುರುವಂದನೆ ಸಲ್ಲಿಸಿದರು. ನಂತರ ಪುತ್ತಿಗೆ ಶ್ರೀಪಾದರು ಭುವನೇಂದ್ರ ಕಿದಿಯೂರು ಇವರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿದರು.






