ಆನೆಗುಡ್ಡೆ ವಿನಾಯಕ ದೇಗುಲದಲ್ಲಿ ನಟ ರಿಷಬ್ ಶೆಟ್ಟಿ ಮೂಡುಗಣಪತಿ ಸೇವೆ
Wednesday, January 28, 2026
ಉಡುಪಿ ಜಿಲ್ಲೆಯ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಭಕ್ತಿಭಾವದಿಂದ ಮೂಡುಗಣಪತಿ ಸೇವೆ ಸಲ್ಲಿಸಿದರು. ಬೆಳಗಿನ ವೇಳೆಯಲ್ಲಿ ದೇವಾಲಯಕ್ಕೆ ಆಗಮಿಸಿದ ಅವರು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.
ಪೂಜೆಯ ಬಳಿಕ ದೇವಾಲಯದ ಅರ್ಚಕರು ರಿಷಬ್ ಶೆಟ್ಟಿಗೆ ಪ್ರಸಾದ ನೀಡಿ ಆಶೀರ್ವಾದ ಮಾಡಿದರು. ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಶೈಲಿ ಹಾಗೂ ಕರಾವಳಿಯ ಸಂಸ್ಕೃತಿ ಮೂಲದ ಕಥೆಗಳ ಮೂಲಕ ಹೆಸರು ಮಾಡಿರುವ ರಿಷಬ್ ಶೆಟ್ಟಿ ಅವರು, ಸದಾ ದೇವರ ಮೇಲೆ ಅಪಾರ ನಂಬಿಕೆ ಇರಿಸಿಕೊಂಡವರು. ಈ ಹಿಂದೆ ಕಾಂತಾರ ಚಿತ್ರದ ಮಹೂರ್ತವನ್ನು ಕೂಡ ಇದೇ ಆನೆಗುಡ್ಡೆ ಶ್ರೀ ವಿನಾಯಕನ ದೇವರ ಸನ್ನಿಧಿಯಲ್ಲಿ ಪ್ರಾರಂಭಿಸಿದ್ದರು.