ಕತ್ತರಿಸಿದ ಬಳಿಕವೂ ಮೀನು ಜೀವಂತ...!(Video)
Tuesday, January 27, 2026
ಕತ್ತರಿಸಿದ ಬಳಿಕವೂ ಬಂಗುಡೆ ಮೀನೊಂದು ಜೀವಂತವಾಗಿದ್ದ ಅಪರೂಪದ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದೆ.
ಗ್ರಾಹಕರೊಬ್ಬರು ಮೀನು ಮಾರಾಟ ಮಹಿಳೆಯ ಬಳಿ ಬಂಗುಡೆ ಮೀನು ಖರೀದಿಸಿದ್ದು, ಅದನ್ನು ಕತ್ತರಿಸಿ ಕೊಡುವಂತೆ ಹೇಳಿದ್ದಾರೆ. ಆಗ ಮಹಿಳೆ ಮೀನನ್ನು ಕತ್ತರಿಸಿ ಟಬ್ ಗೆ ಹಾಕಿದ್ದು, ಅದರಲ್ಲೊಂದು ಮೀನು ಜೀವಂತವಾಗಿ ಒದ್ದಾಡುತ್ತಿತ್ತು. ಈ ಜೀವಂತ ಮೀನನ್ನು ಕಂಡು ಬಂದರಿನಲ್ಲಿದ್ದವರು ನಿಬ್ಬೆರಗಾಗಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.