-->
 ಪುತ್ತೂರು ಮಹಿಳಾ ಕಾಲೇಜು ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಪುತ್ತೂರು ಮಹಿಳಾ ಕಾಲೇಜು ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ


ಪುತ್ತೂರು ಮಹಿಳಾ ಕಾಲೇಜಿನ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರು ರಸ್ತೆ ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದರು. 


ಪುತ್ತೂರು ನಗರದ ಮಧ್ಯೆ ಇರುವ ಮಹಿಳಾ ಕಾಲೇಜು ಇದಾಗಿದ್ದು, ಹೊಸ ಕಟ್ಟಡ ನಿರ್ಮಾಣವಾಗುತ್ತದೆ ಎಂದು ಹೇಳಿ ಪ್ರತಿವರ್ಷ ಹೇಳುತ್ತಾ ಇದ್ದರೂ ಇನ್ನೂ ಕಟ್ಟಡ ಕಾಮಗಾರಿ ಆಗಿಲ್ಲ. ಅಲ್ಲದೆ ವಿಧ್ಯಾರ್ಥಿನಿಯರಿಗೆ ಸರಿಯಾದ ತರಗತಿ ಇಲ್ಲದೆ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಪಕ್ಕದಲ್ಲೆ ಇರುವ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಿOದಾಗಿ ಕಾಲೇಜಿನ ಸುತ್ತಮುತ್ತ ವಾಸನೆ ಹರಡುತ್ತಿದೆ ಎಂದು ವಿಧ್ಯಾರ್ಥಿನಿಯರು ಆರೋಪಿಸಿದ್ದಾರೆ.ಆಸ್ಪತ್ರೆಯಲ್ಲಿ ಕಾಮಗಾರಿ ನಡೆಯುತ್ತಿದೆ, ಇದರಿಂದಾಗಿ ತರಗತಿಯ ತುಂಬೆಲ್ಲಾ ಧೂಳು ತುಂಬಿದೆ, ಪ್ರತಿದಿನವೂ ವಿದ್ಯಾರ್ಥಿಗಳು ಆನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಅಲ್ಲದೆ ಈಗ ಇರುವ ತರಗತಿಗಳು ಇಂದೋ, ನಾಳೆಯೋ ಬೀಳುವ ಸ್ಥಿತಿಯಲ್ಲಿದೆ ಎಂದು ವಿಧ್ಯಾರ್ಥಿನಿಯರು ಆರೋಪಿಸಿದ್ದಾರೆ. ಇದರಿಂದ ಬೇಸತ್ತು ವಿದ್ಯಾರ್ಥಿನಿಯರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪುತ್ತೂರು ಶಾಸಕ ಅಶೋಕ್ ರೈ ಪ್ರತಿಭಟನೆ ಮಾಡಲು ಅವಕಾಶ ನೀಡಿದ ಕಾಲೇಜು ಉಪನ್ಯಾಸಕರ ಜೊತೆಗೆ ವಾಗ್ವಾದ ನಡೆಸಿದರು. ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಅಶೋಕ್ ಕುಮಾರ್ ರೈ , ಕಾಲೇಜಿನ ಸಮಸ್ಯೆಗಳನ್ನು ನನ್ನ ಗಮನಕ್ಕೆ ಯಾಕೆ ತಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ವಿದ್ಯಾರ್ಥಿನಿಗಳ ಎದುರೇ ಶಾಸಕರಿಗೆ ಸಮಸ್ಯೆಯ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿದೆ ಎಂದರು. ಬಳಿಕ ಮಾತನಾಡಿದ ಶಾಸಕ ಅಶೋಕ್ ರೈ ತರಗತಿಗೆ ದೂಳು ಬರದಂತೆ ರಾತ್ರಿ ವೇಳೆ ಕಾಮಗಾರಿ ನಡೆಸಲು ತಿಳಿಸುತ್ತೆನೆ ಎಂದರು.






Ads on article

Advertise in articles 1

advertising articles 2

Advertise under the article