ಉಡುಪಿ ಉಪ ವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ ವರ್ಗಾವಣೆ
Thursday, February 12, 2026
ಉಡುಪಿ ಉಪ ವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ ಅವರನ್ನು ಕಲಬುರ್ಗಿ ನಗರ ಸಂಚಾರ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಉಡುಪಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಭು ಡಿ.ಟಿ ಅವರು, ಅಪಘಾತ ತಡೆ ಜಾಗೃತಿ, ಬಾಲ್ಯವಿವಾಹ ನಿರ್ಮೂಲನೆ ಮತ್ತು ದೀರ್ಘಕಾಲದಿಂದ ನಾಪತ್ತೆಯಾಗಿದ್ದ ಮಕ್ಕಳ ಪತ್ತೆ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ಮನೆ ಮನೆಗೆ ಪೊಲೀಸ್' ಅಭಿಯಾನ ಮತ್ತು ಯುವಜನರಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಭು ಡಿ.ಟಿ ಅವರಿಂದ ತೆರವಾದ ಉಡುಪಿ ಉಪವಿಭಾಗಕ್ಕೆ ಕಾರ್ಕಳ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಅವರನ್ನು ನಿಯುಕ್ತಿಗೊಳಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆ ರಾಜ್ಯದ 23 ಡಿವೈಎಸ್ಪಿಗಳು ಹಾಗೂ 129 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆಗೊಳಿಸಿ ರಾಜ್ಯಸರ್ಕಾರ ಆದೇಶಿಸಿದೆ.