-->
 ವೃದ್ಧನ ಸಾವು ಕೊಲೆಯೆಂದು ಸಾಬೀತು; ಪುತ್ರ ಸಹಿತ ಮೂವರ ಬಂಧನ

ವೃದ್ಧನ ಸಾವು ಕೊಲೆಯೆಂದು ಸಾಬೀತು; ಪುತ್ರ ಸಹಿತ ಮೂವರ ಬಂಧನ


ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಗ್ರಾಮದ ಕೊಪ್ಪಮಾದೇರಿ ನಿವಾಸಿ ಕೆ. ಸಿ. ವರ್ಗೀಸ್ (73) ಎಂಬವರ ಸಾವು ಕೊಲೆ ಎಂದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪುತ್ರ ಸಹಿತ ಮೂವರನ್ನು ಬಂಧಿಸಿದ್ದಾರೆ.

ಮೃತ ವರ್ಗೀಸ್ ಅವರ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಬಲವಾದ ಪೆಟ್ಟು ಬಿದ್ದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬOಧಿಸಿದOತೆ ಮೃತರ ಮಗ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ, ವರ್ಗೀಸ್ ಅವರ ಪುತ್ರ ಕೆ. ವಿ. ಥಾಮಸ್ ಅಲಿಯಾಸ್ ವಿಲ್ಸನ್, ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ನಿವಾಸಿ ಸಿ. ಟಿ. ರಾಜು ಅಲಿಯಾಸ್ ವರ್ಗೀಸ್ ಮತ್ತು ನೆಲ್ಯಾಡಿಯ ಚಾಕೊಚ್ಚ ಎಂದು ಗುರುತಿಸಲಾಗಿದೆ.

ಸುಮಾರು ಆರು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಈ ಬಗ್ಗೆ ವರ್ಗೀಸ್ ಅವರ ಪುತ್ರ ಕೆ. ವಿ. ಥಾಮಸ್ ಅವರೇ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದರಲ್ಲದೆ, ವಿಧಿವಿಜ್ಞಾನ ತಂಡವೂ ಸ್ಥಳ ಪರಿಶೀಲನೆ ನಡೆಸಿತ್ತು.

ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಹಲ್ಲೆಯ ಸಂದರ್ಭದಲ್ಲಿ ತಲೆಗೆ ಆದ ತೀವ್ರ ಗಾಯಗಳಿಂದಲೇ ವರ್ಗೀಸ್ ಮೃತಪಟ್ಟಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದಾರೆ. ಹೆಚ್ಚಿನ ತನಿಖೆ ನಡೆಸಿದ ಸಂದರ್ಭದಲ್ಲಿ ಇದು ಕೊಲೆ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article