-->
 ಕರವೇ ಉಡುಪಿ ಜಿಲ್ಲಾ ಸಂಘಟನೆಗೆ ಮಹಿಳಾ ಸದಸ್ಯರ ಸೇರ್ಪಡೆ

ಕರವೇ ಉಡುಪಿ ಜಿಲ್ಲಾ ಸಂಘಟನೆಗೆ ಮಹಿಳಾ ಸದಸ್ಯರ ಸೇರ್ಪಡೆ


ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣಕ್ಕೆ 5 ಜನ ಮಹಿಳಾ ಸದಸ್ಯರು ಉಡುಪಿಯ ಮಥುರಾ ಛತ್ರದಲ್ಲಿ ಸೇರ್ಪಡೆಗೊಂಡರು.

ಕರವೇ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಉಡುಪಿ ಜಿಲ್ಲಾ ಗೌರವಾಧ್ಯಾಕ್ಷರಾದ ಅನ್ಸಾರ್ ಅಹಮದ್ ಅವರ ಅನುಮತಿಯನ್ನು ಕೋರಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯರಾದ ವಿಶಾಲಿ, ಮಾಧವಿ, ವಿಜಯ, ಜಯಂತಿ, ಮಂಜುಳಾ, ಸಂಘಟನೆಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠ ಗೊಳಿಸುವಲ್ಲಿ ಎಲ್ಲರೂ ಸೇರಿ ಜೊತೆಯಾಗಿ ಶ್ರಮಿಸೋಣ ಎಂದು  ಮಹಿಳೆಯರಿಗೆ ಕರೆ ನೀಡಿದರು.

ಕರವೇ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಅನುಷಾ ಆಚಾರ್ ಪಳ್ಳಿ, ಗೌರವ ಸಲಹೆಗಾರರಾದ ಸವಿತಾ, ಪವಿತ್ರ ಶೆಟ್ಟಿ, ಮೀರಾ ಸಾವಂತ್, ಜಯಪ್ರಕಾಶ್ ಉಪಸ್ಥಿತರಿದ್ದರು. 


Ads on article

Advertise in articles 1

advertising articles 2

Advertise under the article