ದೊಡ್ಡಣಗುಡ್ಡೆಯಲ್ಲಿ "ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ"
Tuesday, February 10, 2026
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ವಿಶ್ವಕರ್ಮ ಸಹಕಾರ ಬ್ಯಾಂಕ್ ಉಡುಪಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಷ್ಣುಮೂರ್ತಿ ಫ್ರೆಂಡ್ಸ್, ದೊಡ್ಡಣ್ಣಗುಡ್ಡೆ ವಿಷ್ಣುಮೂರ್ತಿ ಮಹಿಳಾ ಘಟಕ, ದೊಡ್ಡಣ್ಣಗುಡ್ಡೆ ನಾಥ ಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ "ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ" ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಇವರ ಕಚೇರಿಯ ಬಳಿ ಇರುವ ಸಾರ್ವಜನಿಕ ಆಟದ ಮೈದಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಿದ್ಧ ಕಣ್ಣಿನ ಹನಿಯ ಉಪಯೋಗವನ್ನು ಪಡೆದುಕೊಂಡು ಕಣ್ಣಿನ ತೊಂದರೆಗಳನ್ನು ದೂರ ಮಾಡಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಜೆ.ಪಿ. ಜಗದೀಶ್ ಅಧಿಕಾರಿ, ಹರೀಶ್ ಕುಮಾರಿಯಂ ಶೆಟ್ಟಿ, ಅರುಣ್ ಪ್ರಕಾಶ್ ಶೆಟ್ಟಿ, ಜಗದೀಶ್ ಆಚಾರ್ಯ, ಅನುಪಮಾ ಎಂ ಜೋಗಿ, ಹರಿಶ್ಚಂದ್ರ ಜೋಗಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಅನುಪಮಾ ಎಂ. ಜೋಗಿ ನಿರೂಪಿಸಿ ವಂದಿಸಿದರು.