ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನುಪಾಪು ಆತ್ಮಹತ್ಯೆ
Tuesday, February 10, 2026
ಸಾಮಾಜಿಕ ಜಾಲತಾಣದಲ್ಲಿ ಚಿನ್ನುಪಾಪು ಎಂದೇ ಪ್ರಸಿದ್ಧರಾಗಿದ್ದ ಇನ್‌ಸ್ಟಾಗ್ರಾಮ್‌ನಲ್ಲಿ 206,000 ಕ್ಕೂ ಅಧಿಕ ಪಾಲೋವರ್ಸ್ ಹೊಂದಿದ್ದ ಸೋಶಿಯಲ್ ಮಿಡಿಯಾ ಇನ್ ಫ್ಲೂಯೆನ್ಸರ್ ರೇಷ್ಮಾ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದೇಲಂಪಾಡಿ ಪಂಚಾಯತ್‌ನ ಅಧೂರು ಮೂಲದ ರೇಷ್ಮಾ (24) ಕಾಸರಗೋಡು ಪಟ್ಟಣದ ಬಳಿಯ ಉಳಿಯತಡ್ಕದಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಮಧ್ಯಾಹ್ನದ ಸುಮಾರಿಗೆ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರೇಷ್ಮಾ ಮತ್ತು ಅವರ ಪತಿ ಪ್ರೇಮ ವಿವಾಹವಾಗಿದ್ದರು. ಆದರೆ ಒಂದು ತಿಂಗಳ ಹಿಂದೆ ಅವರು ವಿಚ್ಛೇದನ ಪಡೆದಿದ್ದರು. ಇವರಿಗೆ ನಾಲ್ಕು ವರ್ಷದ ಮಗು ಇದೆ. ನೆರೆಹೊರೆಯವರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದು, ಅದಾಗಲೇ ಆಕೆ ಮೃತಪಟ್ಟಿದ್ದರು.