-->
 ರೇಡಿಯೋ ಮಣಿಪಾಲ್ ವತಿಯಿಂದ ವಿಶ್ವ ರೇಡಿಯೋ ದಿನ ಅಚರಣೆ

ರೇಡಿಯೋ ಮಣಿಪಾಲ್ ವತಿಯಿಂದ ವಿಶ್ವ ರೇಡಿಯೋ ದಿನ ಅಚರಣೆ


ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರವು  ಕ.ಸಾ.ಪ. ಉಡುಪಿ ತಾಲ್ಲೂಕು ಘಟಕದ ಸಹಯೋಗದಲ್ಲಿ, ಕಾರ್ಕಳ ಗಾಂಧಿಮೈದಾನ ಬಳಿ  ಇರುವ ರೇಡಿಯೋ ಗೋಪುರವನ್ನು ನವೀಕರಿಸಲು ಹೊರಟಿರುವ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಕನಸಿಗೆ ಬೆಂಬಲವಾಗಿ ಒಂದು ರೇಡಿಯೋ ಸೆಟ್ ಅನ್ನು ಕೊಡುಗೆಯಾಗಿ ನೀಡಿದೆ.

ರೇಡಿಯೋ ಕೇಳುವ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಹಳೆಯ ರೇಡಿಯೋ ಗೋಪುರದ ನೆನಪನ್ನು ಉಳಿಸುವ ಉದ್ದೇಶದಿಂದ, ರೇಡಿಯೋ ಮಣಿಪಾಲ್ ಕಾರ್ಕಳದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ಜೊತೆಗೂಡಿ ವಿಶ್ವ ರೇಡಿಯೋ ದಿನವನ್ನು ಆಚರಿಸಿತು. ಈ ಸಂದರ್ಭ ರೇಡಿಯೊ ಜೊತೆಗಿನ ನಂಟನ್ನು ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರು ಮೆಲುಕು ಹಾಕಿದರು. ಈ ಸಂದರ್ಭ ರೇಡಿಯೊ ಮಣಿಪಾಲ್ ನ ಡಾ.ರಶ್ಮಿ ಅಮ್ಮೆಂಬಳ ಹಾಗೂ ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರು ಉಪಸ್ಥಿತರಿದ್ದರು. ಕ.ಸಾ.ಪ ಉಡುಪಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜನಾರ್ದನ ಕೊಡವೂರು ಸಹಕರಿಸಿದರು.

Ads on article

Advertise in articles 1

advertising articles 2

Advertise under the article