-->
ಖರೀದಿ ನೆಪದಲ್ಲಿ ಚಿನ್ನದ ಸರಗಳ್ಳತನ ಪ್ರಕರಣ; ಆರೋಪಿಯ ಬಂಧನ

ಖರೀದಿ ನೆಪದಲ್ಲಿ ಚಿನ್ನದ ಸರಗಳ್ಳತನ ಪ್ರಕರಣ; ಆರೋಪಿಯ ಬಂಧನ



ಚಿನ್ನ ಖರೀದಿಸುವ ನೆಪದಲ್ಲಿ ಕುಂದಾಪುರ ಶಾಸ್ತ್ರೀಸರ್ಕಲ್ ಬಳಿಯ ಇರುವ SPG GOLD AND DIAMAND  ಅಂಗಡಿಯಿಂದ  9 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿದ ಕಳ್ಳನನ್ನು ಬಂಧಿಸಿದ್ದಾರೆ.

ಬಂಟ್ವಾಳ ಬಡಗ ಕಜೆಕಾರ್ ನಿವಾಸಿ ರಮೇಶ(42) ಬಂಧಿತ ಆರೋಪಿ. ಜ. 27 ರಂದು ಕುಂದಾಪುರ ಶಾಸ್ತ್ರೀಸರ್ಕಲ್ ಬಳಿ ಇರುವ SPG GOLD AND DIAMAND  ಅಂಗಡಿಗೆ ಬಂದು  ಚಿನ್ನವನ್ನು ಖರೀದಿಸುವ ನೆಪದಲ್ಲಿಸುಮಾರು 9 ಗ್ರಾಂ ತೂಕದ 125000 ರೂ ಮೌಲ್ಯದ ಚಿನ್ನದ ಸರವನ್ನು ಕಳವುಗೈದಿದ್ದ. ಈ ಬಗ್ಗೆ  ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 05/2026 ಕಲಂ. 305 BNS ರಂತೆ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ತನಿಖೆಯನ್ನು ಕುಂದಾಪುರ ಉಪವಿಭಾಗ ಪೋಲೀಸ್ ಉಪಾಧೀಕ್ಷಕ ಹೆಚ್‌ ಡಿ ಕುಲಕರ್ಣಿ ಮಾರ್ಗದರ್ಶನದಂತೆ  ಕುಂದಾಪುರ ಪೊಲೀಸ್ ಠಾಣಾ  ನಿರೀಕ್ಷಕರಾದ ಜಯರಾಮ್ ಡಿ ಗೌಡ ನೇತೃತ್ವದಲ್ಲಿ ಠಾಣಾ ಪಿಎಸ್ಐ  ನಂಜಾ ನಾಯ್ಕ್, ಪುಷ್ಪ ಹಾಗೂ ಸಿಬ್ಬಂದಿಗಳಾದ ಸಂತೋಷ, ಮಹಾಬಲ ಶೆಟ್ಟಿಗಾರ, ಪ್ರೀನ್ಸ್, ಘನಶ್ಯಾಮ್, ಸಂತೋಷ ದೇವಾಡಿಗ, ಗೌತಮ,ಲೋಹಿತ್ ,ಚಂದ್ರಶೆಟ್ಟಿ ಅವರ ತಂಡ ಆರೋಪಿಯನ್ನು ಬಂಧಿಸಿದೆ. ಬಂಧಿತನಿಂದ SPG GOLD and DIAMAND ಅಂಗಡಿಯಿಂದ ಕಳ್ಳತನ ಮಾಡಿದ ಚಿನ್ನದ ಚೈನ್ ಮತ್ತು ಆತನ ವಶದಲ್ಲಿದ್ದ ರೂಪಾಯಿ 33000 ಹಣವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.  

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


Ads on article

Advertise in articles 1

advertising articles 2

Advertise under the article