ಉರಿ ಬಿಸಿಲು; ಕೇರಳದಲ್ಲಿ ಕಾರ್ಮಿಕರ ಕೆಲಸ ಅವಧಿಯಲ್ಲಿ ಮಾರ್ಪಾಡು
Tuesday, February 17, 2026
ಕೇರಳ ರಾಜ್ಯದಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸದ ಅವಧಿಯಲ್ಲಿ ಮಾರ್ಪಾಡು ಮಾಡಿ ಸರಕಾರ ಆದೇಶ ಹೊರಡಿಸಿದೆ.
ಮೇ 20 ರವರೆಗೆ, ಹಗಲಿನ ವೇಳೆಯಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಧ್ಯಾಹ್ನ 12 ರಿಂದ 3 ರವರೆಗೆ ವಿಶ್ರಾಂತಿ ಅವಧಿ ಇರುತ್ತದೆ. ಕೆಲಸದ ಸಮಯವನ್ನು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ 8 ಗಂಟೆಗೆ ನಿಗದಿಪಡಿಸಲಾಗಿದೆ.
ಪಾಳಿ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ, ಬೆಳಗಿನ ಪಾಳಿಯನ್ನು ಮಧ್ಯಾಹ್ನ 12 ಗಂಟೆಗೆ ಕೊನೆಗೊಳ್ಳುವಂತೆ ಮತ್ತು ಮಧ್ಯಾಹ್ನದ ಪಾಳಿ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುವOತೆ ಸೂಚಿಸಲಾಗಿದೆ. ಈ ಆದೇಶ ಸಮುದ್ರ ಮಟ್ಟದಿಂದ 3000 ಅಡಿಗಳಿಗಿಂತ ಹೆಚ್ಚು ಎತ್ತರವಿರುವ ಮತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಅಪಾಯವಿಲ್ಲದ ಪ್ರದೇಶಗಳನ್ನು ಹೊರಗಿಡಲಾಗಿದೆ.