-->
 ಬೈಕ್ ಸ್ಕಿಡ್: ಗಂಭೀರ ಗಾಯಗೊಂಡ ಸವಾರ ಸಾವು

ಬೈಕ್ ಸ್ಕಿಡ್: ಗಂಭೀರ ಗಾಯಗೊಂಡ ಸವಾರ ಸಾವು


ಬೈಕ್ ಪಲ್ಟಿಯಾಗಿ ಸವಾರ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾಡಗುಡ್ಡೆಯಂಗಡಿಯ ಬೆಳ್ಳಾಡಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಖ್ಯಾತ ಯಕ್ಷಗಾನ ಕಲಾವಿದ ದಿವಂಗತ ಮೊಳಹಳ್ಳಿ ಹೆರಿಯ ನಾಯ್ಕ್ ಅವರ ಹಿರಿಯ ಪುತ್ರ ಕೋಟ ಮಣೂರು ಪಡುಕರೆ ನಿವಾಸಿ ಪ್ರಭಾಕರ್ ಮೆಂಡನ್ ಎಂದು ಗುರುತಿಸಲಾಗಿದೆ.

ಅವರು ಭಾನುವಾರ ರಾತ್ರಿ ಮಣೂರು ಪಡುಕರೆ ಮನೆಯಿಂದ ತಮ್ಮ ಪತ್ನಿಯ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ನಾಡಗುಡ್ಡೆಯಂಗಡಿಯ ಬೆಳ್ಳಾಡಿ ಬಳಿ ಅವರ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮೃತರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Ads on article

Advertise in articles 1

advertising articles 2

Advertise under the article