ಮಳೆನೀರು ಹರಿಯುವ ಕಾಲುವೆಯಲ್ಲಿ ವಿಷಕಾರಿ ಡ್ರೈನೇಜ್ ನೀರು; ಸ್ಥಳೀಯರಲ್ಲಿ ರೋಗ ಭೀತಿ (Video)
Tuesday, February 24, 2026
ಉಡುಪಿ ನಗರದ ವಿದ್ಯಾಸಮುದ್ರತೀರ್ಥ ರಸ್ತೆಯ, ಅಮ್ಮುಂಜೆ ಪೆಟ್ರೋಲ್ ಬಂಕ್ ಎದುರಿನಲ್ಲಿ ಇರುವ ಮಳೆನೀರು ಹರಿಯುವ ಕಾಲುವೆಯಲ್ಲಿ ವಿಷಕಾರಿ ಡ್ರೈನೇಜ್ ನೀರು ಹರಿಯುತ್ತಿದೆ. ಪರಿಣಾಮ ಪರಿಸರದ ಬಾವಿಗಳ ಶುದ್ಧ ಕುಡಿಯುವ ನೀರು ಕಲುಷಿತಗೊಂಡಿದ್ದು, ನೀರು ಸೇವಿಸಿದ ಸ್ಥಳೀಯ ನಿವಾಸಿಗಳಿಗೆ ಆರೋಗ್ಯ ಏರುಪೇರಾಗಿದೆ.
ಈ ಪರಿಸರದಲ್ಲಿ ಗಬ್ಬು ವಾಸನೆ ಹಬ್ಬಿದ್ದು ವಾಕರಿಕೆ ತರಿಸುತ್ತಿದೆ. ಕಾಲುವೆಯು ಮಾರಕ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ರೋಗ ವಾಹಕ ಸೊಳ್ಳೆಗಳಿಂದ ವ್ಯಾಧಿಗಳು ಪಸರಿಸಬಹುದೆನ್ನುವ ಭೀತಿಯು ಎದುರಾಗಿದೆ. ಸಾರ್ವಜನಿಕ ವಲಯದಲ್ಲಿ ಎದುರಾಗಿರುವ ಗಂಭೀರ ಸಮಸ್ಯೆಯನ್ನು ಜಿಲ್ಲಾಡಳಿತ, ನಗರಾಡಳಿತವು ಪರಿಹರಿಸುವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ತಾರಾನಾಥ್ ಮೇಸ್ತ ಶಿರೂರು ಒತ್ತಾಯಿಸಿದ್ದಾರೆ.