-->
ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿ ಸಾವು

ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿ ಸಾವು


ಮಣಿಪಾಲದ ಸರಳಬೆಟ್ಟು‌ ಶಿವಪಾಡಿ ರಮಾನಂದ ಸ್ಮ್ರತಿ ಮಂಟಪದ ಹೊರಜಗುಲಿಯಲ್ಲಿ ಕುಸಿದುಬಿದ್ದು ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ‌ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಮೃತ ವ್ಯಕ್ತಿಯನ್ನು ಒಳಕಾಡು ನಿವಾಸಿ ದ್ವಾರಕನಾಥ್ ಎಂದು ಗುರುತಿಸಲಾಗಿದೆ.

ಶಿವಪಾಡಿ ರಮಾನಂದ ಸ್ಮೃತಿ ಮಂಟಪದ ಬಳಿ ಕುಸಿದು ಬಿದ್ದಿದ್ದ ಮಾಹಿತಿಯನ್ನು ಸಂದೇಶ್ ಪ್ರಭು ಎನ್ನುವರು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರಿಗೆ ತಿಳಿಸಿದ್ದರು. ಅದರಂತೆ ನಿತ್ಯಾನಂದ ಒಳಕಾಡು ಅವರು ಅಂಬುಲೆನ್ಸ್ ವಾಹನದಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು.‌ ಪರೀಕ್ಷಿಸಿದ ವೈದ್ಯರು ವ್ಯಕ್ತಿ ಅದಾಗಲೇ  ಮೃತಪಟ್ಟಿರುವುದು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article