-->
 ವೃದ್ಧೆಯ ಚಿನ್ನದ ಸರ ಎಗರಿಸಿ ಪರಾರಿ; ಮೂವರು ಯುವಕರಿಂದ ಕೃತ್ಯ

ವೃದ್ಧೆಯ ಚಿನ್ನದ ಸರ ಎಗರಿಸಿ ಪರಾರಿ; ಮೂವರು ಯುವಕರಿಂದ ಕೃತ್ಯ


ಬೈಕಿನಲ್ಲಿ ಬಂದಿದ್ದ ಮೂವರು ಯುವಕರ ತಂಡವೊOದು ವೃದ್ಧೆಯ ಚಿನದನಸ ಸರ ಎಗರಿಸಿ ಪರಾರಿಯಾದ ಘಟನೆ ಶಿರ್ವ ಠಾಣಾ ವ್ಯಾಪ್ತಿಯ ಶಂಕರಪುರದಲ್ಲಿ ನಡೆದಿದೆ. 

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಹೆಲೆನ್ ಡಿಸೋಜಾ ಎಂಬವರ ಮನೆ ಸಮೀಪ ಬಂದ ಯುವಕರ ತಂಡ ಬಾಡಿಗೆ ಮನೆಯ ಬಗ್ಗೆ ವಿಚಾರಿಸಿದ್ದಾರೆ. ವೃದ್ಧೆ ಹೆಲೆನ್ ಅವರು ಬಾಡಿಗೆ ಮನೆ ಕುರಿತು ವಿಚಾರಿಸಲು ಮೊಬೈಲ್ ನಂಬರ್ ಪಡೆಯುತ್ತಿದ್ದ ವೇಳೆ ವೃದ್ಧೆಯ ಕುತ್ತಿಗೆಯಲ್ಲಿದ್ದ 3 ಪವನ್ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಶಿರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ. ಕಳ್ಳರ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ತನಿಖೆ ಮುಂದುವರಿದೆ. 


Ads on article

Advertise in articles 1

advertising articles 2

Advertise under the article