ಜನನಿಬಿಡ ಪ್ರದೇಶದಲ್ಲಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ವ್ಯಕ್ತಿ (Video)
Monday, February 23, 2026
ಉಡುಪಿಯ ಕಲ್ಸಂಕ ಬಳಿ ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯೋರ್ವ ಮೈಮೇಲೆ ಬೆಂಕಿ ಹಚ್ಚಿಕೊಂಡು ರಾದ್ಧಾಂತ ಮಾಡಿದ ಘಟನೆ ಭಾನುವಾರ ಸಂಜೆ ನಡೆದಿದೆ. ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಪೊಲೀಸರ ಸಹಕಾರದಿಂದ ರಕ್ಷಿಸಿದ್ದಾರೆ.
ವಾಹನ ದಟ್ಟಣೆಯಿಂದ ಕೂಡಿರುವ ಕಲ್ಸಂಕ ಜಂಕ್ಷನ್ ನಲ್ಲಿ ವ್ಯಕ್ತಿಯು ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಅಲ್ಲದೇ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರ ಕರ್ತವ್ಯಕ್ಕೂ ಅಡ್ಡಿ ಪಡಿಸಿದ್ದ. ಇದರಿಂದಾಗಿ ಸಾರ್ವಜನಿಕರು ಆತಂಕಕ್ಕೀಡಾಗಿದ್ದರು. ಸ್ಥಳಕ್ಕೆ ಬಂದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಪೊಲೀಸರ ಸಹಕಾರದಿಂದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ವ್ಯಕ್ತಿಯನ್ನು ವಶಕ್ಕೆ ಪಡೆದ ಪೋಲಿಸರು ಆತನ ಮನವೊಲಿಸಿ ಆತನ ಊರು ಗದಗಕ್ಕೆ ರವಾನಿಸುವ ವ್ಯವಸ್ಥೆಗೊಳಿಸಿದರು. ನಗರ ಪೋಲಿಸ್ ಠಾಣೆಯ ಎಸ್ ಐ, ನಾರಾಯಣ, ಎಸ್ ಐ ಗಂಗಪ್ಪ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.