-->
ಲೈಂಗಿಕ ಕಿರುಕುಳ ಆರೋಪ; ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಅಮಾನತು

ಲೈಂಗಿಕ ಕಿರುಕುಳ ಆರೋಪ; ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಅಮಾನತು


ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸ್‌ ಇನ್‌ಸ್ಪೆಕ್ಟರ್ ಸಂದೇಶ್‌ ಅವರನ್ನು ಎಸಿಪಿಯವರ ತನಿಖೆಯ ವರದಿಯನ್ನು ಆಧರಿಸಿ ಮಂಗಳೂರು ಪೊಲೀಸ್‌ ಕಮಿಷನರ್‌ ತಾತ್ಕಾಲಿಕವಾಗಿ ಅಮಾನತು ಮಾಡಿ ಆದೇಶಿಸಿದ್ದಾರೆ.

ಎಸಿಪಿ ಶ್ರೀಕಾಂತ್ ಪಣಂಬೂರು ಎಸಿಪಿ ಕಚೇರಿಯಲ್ಲಿ ಸಂದೇಶ್‌ನನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ವರದಿಯನ್ವಯ ಸುಮತಿ ನಾಯಕ್ ಎಂಬ ಮಹಿಳೆಗೂ ಆಕೆಯ ಸಹೋದರಿಗೂ ಕುಟುಂಬ ವ್ಯಾಜ್ಯವಿತ್ತು. ಈ ಸಂಬಂಧ ಸುಮತಿ ನಾಯಕ್‌ ವಿರುದ್ಧ ಎರಡು ಪ್ರಕರಣಗಳು ಹಾಗೂ ಆಕೆಯ ಸಹೋದರಿ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಇನ್ಸ್‌ಪೆಕ್ಟ‌ರ್ ವಿರುದ್ಧವೂ ದೂರಿನ ಮೇರೆಗೆ ಒಂದು ಪ್ರಕರಣ ದಾಖಲಾಗಿದೆ. ಒಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕರಣಗಳಿಗೆ ಹೈಕೋರ್ಟ್‌ನಲ್ಲಿ ಸ್ಟೇ ಇದೆ ಮತ್ತು ಅವುಗಳನ್ನು ನ್ಯಾಯಾಲಯದಲ್ಲಿ ತೀರ್ಮಾನಿಸಲಾಗುತ್ತದೆ.

ಮತ್ತೊಂದು ಮಹಿಳೆ ಅವಿತಾ ಮಿನಾಜೆಸ್‌ ಎಂಬಾಕೆ ಸಂದೇಶ್‌ ವಿರುದ್ಧ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ಆಕೆಯ ಪತಿಯ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ. ಒಂದರಲಿ ಬಿಡುಗಡೆ ಆಗಿದಾರೆ.

ಅವುಗಳಲ್ಲಿ ಒಂದು ಪ್ರಕರಣದಲ್ಲಿ, ಬಡ ವ್ಯಕ್ತಿಯ ಕಿಡ್ನಿ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದಲ್ಲಿ ಅವಿತಾ ಮತ್ತು ಅವರ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಕ್ಷ್ಯ ಸಂಗ್ರಹಿಸಿದ ಬಳಿಕ ಈ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

ಆದರೆ ಅವಿತಾ ಮಿನಾಜೆಸ್‌ ಮೇಲೆ ಸಂದೇಶ್ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಯಾವುದೇ ಸಾಕ್ಷ್ಯ ದೊರಕಿಲ್ಲ. ಅವರು ಇನ್ಸ್‌ಪೆಕ್ಟ‌ರ್ ತಮ್ಮೊಂದಿಗೆ ದುರ್ವರ್ತನೆ ನಡೆಸಿದರು ಮತ್ತು ಲಂಚ ಕೇಳಿದರು ಎಂದು ಹೇಳಿದ ಸ್ಥಳದಲ್ಲಿ CCTV ಕ್ಯಾಮೆರಾ ಇದ್ದು, ಅವರು ಮಾತನಾಡಿದಾಗ ಅಲ್ಲಿ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಮತ್ತು ಒಬ್ಬ ವಕೀಲರು ಇದ್ದರು. ಆದರೆ ಯಾವುದೇ ಹಣದ ಬೇಡಿಕೆ ಅಥವಾ ಕಿರುಕುಳ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮದಲ್ಲಿ ಹೇಳಿಕೆ ನೀಡಿದ ಈ ಇಬ್ಬರೂ ಮಹಿಳೆಯರು ವೀಡಿಯೋ ಮತ್ತು ಆಡಿಯೋದಲ್ಲಿ ಸಂತ್ರಸ್ತೆ ಮಹಿಳೆಯರಿಂದ ಭಿನ್ನರಾಗಿದ್ದಾರೆ. ಆದರೆ ವೀಡಿಯೋ ಮತ್ತು ಆಡಿಯೋದಲ್ಲಿ ಇನ್ಸ್‌ಪೆಕ್ಟ‌ರ್ ಓರ್ವ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಮತ್ತು ದೂರವಾಣಿಯಲ್ಲಿ ಅಸಭ್ಯವಾಗಿ ಮಾತನಾಡುತಿರುವುದು ಕಂಡು ಬಂದಿದೆ. 

Ads on article

Advertise in articles 1

advertising articles 2

Advertise under the article