-->
 ವಾಣಿಜ್ಯ ಬಳಕೆಯ ಅನಿಲ ವ್ಯತ್ಯಯ; ಹೋಟೇಲ್ ಮಾಲಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ವಾಣಿಜ್ಯ ಬಳಕೆಯ ಅನಿಲ ವ್ಯತ್ಯಯ; ಹೋಟೇಲ್ ಮಾಲಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ


ಕೊಲ್ಲಿ ರಾಷ್ಟçಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಉಂಟಾಗಿರುವ ವಾಣಿಜ್ಯ ಬಳಕೆ ಅನಿಲ ವ್ಯತ್ಯಯದಿಂದಾಗಿ ಹೊಟೇಲ್ ಉದ್ಯಮಕ್ಕೆ ಹೊಡೆತ ಬಿದ್ದಿದ್ದು, ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಹೊಟೇಲ್ ಮಾಲಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.



ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಬಹುತೇಕ ಹೋಟೇಲ್‌ಗಳು ತಾತ್ಕಾಲಿಕವಾಗಿ ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿದೆ. ಉಡುಪಿ ಜಿಲ್ಲೆಯಲ್ಲಿ ಹೊಟೇಲ್ ಊಟವನ್ನೇ ಅವಲಂಬಿಸಿಕೊಂಡಿರುವ ಪರ ಊರ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಇದರಿಂದ ತೊಂದರೆ ಉಂಟಾಗಿದ್ದು, ಹೊಟೇಲ್ ವ್ಯವಹಾರದಲ್ಲೂ ನಷ್ಟ ಉಂಟಾಗಿದೆ. ಹಾಗಾಗಿ ಹೊಟೇಲ್‌ಗಳಿಗೆ ವಾಣಿಜ್ಯ ಬಳಕೆಗೆ ಸಿಲಿಂಡರ್‌ಗಳ ಮರು ಪೂರೈಕೆ ಮಾಡುವಲ್ಲಿ ಗಮನ ಹರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸ್ವರೂಪ ಅವರು, ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿದರು. ಅಲ್ಲದೇ ಇಂಡಕ್ಷನ್ ಸ್ಟವ್ ಮ್ಯಾನಿ ಫ್ಯಾಕ್ಚರಿಂಗ್ ಕಂಪನಿ ಜೊತೆ ಸಭೆ ನಡೆಸುವುದಾಗಿ ತಿಳಿಸಿದರು. ಈ ವೇಳೆ ಉಡುಪಿ ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ನಾಗೇಶ್ ಭಟ್, ಲಕ್ಷö್ಮಣ್ ಮೊದಲಾದವರು ಇದ್ದರು. 

Ads on article

Advertise in articles 1

advertising articles 2

Advertise under the article