🔥🔥ಕತ್ತಿಯಿಂದ ಕಡಿದು ಮಹಿಳೆಯ ಬರ್ಬರ ಹತ್ಯೆ🔥🔥
Tuesday, March 10, 2026
ಮಹಿಳೆಯೊಬ್ಬರನ್ನು ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಸಮೀಪದ ಕನರಾಡಿ ಎಂಬಲ್ಲಿ ನಡೆದಿದೆ.
ವನಜ ಪೂಜಾರಿ ಕೊಲೆಯಾದ ಮಹಿಳೆ. ಪ್ರಕರಣಕ್ಕೆ ಸಂಬOಧಿಸಿ ವಲೇರಿಯನ್ ಮೆಂಡೋನ್ಸಾ ಹಾಗೂ ಪ್ರವೀಣ್ ಮೆಂಡೋನ್ಸಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ರಾತ್ರಿ 8.30ರ ಸುಮಾರಿಗೆ ವಲೇರಿಯನ್ ಮೆಂಡೋನ್ಸಾ ಅವರ ಮನೆಯಲ್ಲಿ ಮಹಿಳೆ ವನಜ ಪೂಜಾರಿ, ವಲೇರಿಯನ್ ಮೆಂಡೋನ್ಸಾ ಹಾಗೂ ಪ್ರವೀಣ್ ಒಟ್ಟಿಗೆ ಸೇರಿ ಮದ್ಯ ಸೇವಿಸಿದ್ದರು. ಬಳಿಕ ಕುಡಿದ ಮತ್ತಿನಲ್ಲಿ ಗಲಾಟೆ ನಡೆದಿದೆ. ಈ ವೇಳೆ ವಲೇರಿಯನ್ ಮೆಂಡೋನ್ಸಾ, ಪ್ರವೀಣ್ ಮೆಂಡೋನ್ಸಾ ಕತ್ತಿಯಿಂದ ವನಜಾ ಪೂಜಾರಿ ಮೇಲೆ ಕಡಿದಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಘಟನೆಯಲ್ಲಿ ವನಜಾ ಪೂಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಭೇಟಿ ನೀಡಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಣಿಪಾಲ ಪೊರೆನ್ಸಿಕ್ ತಂಡ, ಸೋಕೋ ತಂಡ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.
