-->
 ಮೊಟ್ಟೆ ದರದಲ್ಲಿ ಭಾರೀ ಇಳಿಕೆ; ಜನಸಾಮಾನ್ಯರಿಗೆ ಗುಡ್‌ನ್ಯೂಸ್

ಮೊಟ್ಟೆ ದರದಲ್ಲಿ ಭಾರೀ ಇಳಿಕೆ; ಜನಸಾಮಾನ್ಯರಿಗೆ ಗುಡ್‌ನ್ಯೂಸ್


ಪ್ರತೀಯೊಂದು ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಇದೀಗ ಮೊಟ್ಟೆ ದರ ಇಳಿಕೆ ಕಂಡಿದ್ದು, ಜನಸಾಮಾನ್ಯರಿಗೆ ಕೊಂಚ ನಿರಾಳತೆ ತಂದಿದೆ.

ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಮೊಟ್ಟೆಗಳಲ್ಲಿಸುಮಾರು ಶೇ.80ರಷ್ಟು ಮೊಟ್ಟೆಗಳು ಕೊಲ್ಲಿರಾಷ್ಟ್ರಗಳಿಗೆ ರಫ್ತಾಗುತ್ತಿದ್ದವು. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಭೀತಿಯಿಂದಾಗಿ ಸಾರಿಗೆ ವ್ಯವಸ್ಥೆ ಏರುಪೇರಾಗಿದ್ದು, ರಫ್ತು ಸಂಪೂರ್ಣವಾಗಿ ಸ್ಥಗಿತವಾಗಿದೆ.ಹೊರದೇಶಗಳಿಗೆ ಹೋಗಬೇಕಿದ್ದ ಮೊಟ್ಟೆಗಳ ದಾಸ್ತಾನು ಈಗ ದೇಶೀಯ ಮಾರುಕಟ್ಟೆಯನ್ನೆ ಅವಲಂಬಿಸಿದೆ. ಇದರಿಂದಾಗಿ ಸಗಟು ಮತ್ತು ಚಿಲ್ಲರೆ ದರಗಳಲ್ಲಿ ಗಣನೀಯ ಇಳಿಕೆ ಕಂಡುಬOದಿದೆ.

ಇತ್ತೀಚೆಗೆ ಬೆಂಗಳೂರು ಸೇರಿ ದೇಶದ ಹಲವು ರಾಜ್ಯಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು. ಕೆಲವು ಬಾರಿ 8 ರಿಂದ 9 ರೂ.ವರೆಗೂ ಹೆಚ್ಚಳವಾಗಿತ್ತು. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಒಂದು ಮೊಟ್ಟೆಯ ಹೋಲ್‌ಸೇಲ್ ದರ ಸದ್ಯ 4.80 ರೂ.ಗೆ ಇಳಿಕೆ ಕಂಡಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ 4.50 ರಷ್ಟು ಕುಸಿತ ಕಂಡಿದೆ. ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಒಂದು ಟ್ರೇ ಅಂದರೆ 30 ಮೊಟ್ಟೆಗಳನ್ನು 144 ರೂ.ಗೆ ಮತ್ತು 100 ಮೊಟ್ಟೆಗಳು 480 ರೂ.ಗೆ ಖರೀದಿಗೆ ಲಭ್ಯವಿದೆ. ಅಂತೂ ಮೊಟ್ಟೆ ಪ್ರಿಯರಿಗೆ, ಜನಸಾಮಾನ್ಯರಿಗೆ ನಿಟ್ಟುಸಿರು ಬಿಡುವಂತಾಗಿದೆ.


Ads on article

Advertise in articles 1

advertising articles 2

Advertise under the article