-->
 ಯುವ ತಬಲಾ ವಾದಕ ಚಾರುಕೇಶ್ ಬಂಗೇರ ನಿಧನ

ಯುವ ತಬಲಾ ವಾದಕ ಚಾರುಕೇಶ್ ಬಂಗೇರ ನಿಧನ


ಯುವ ತಬಲಾ ವಾದಕ ಚಾರುಕೇಶ್ ಬಂಗೇರ (27) ಅವರು ಇಂದು ಮುಂಬೈಯಲ್ಲಿ ನಿಧನರಾಗಿದ್ದಾರೆ.

ಮಂಗಳೂರು ಮೂಲದ ಇವರು ಕದ್ರಿ ಗೋಪಾಲನಾಥ್ ಅವರಂತಹ ಪ್ರಸಿದ್ಧ ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಸಂಗೀತ ಕ್ಷೇತ್ರದಲ್ಲಿ ಭರವಸೆಯ ಯುವ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು. ದೇಶದ ವಿವಿಧ ಭಾಗಗಳಲ್ಲಿ ನಡೆದ ಸಂಗೀತ ಕಚೇರಿಗಳಲ್ಲಿ ತಬಲಾ ಸಾಥಿ ನೀಡುವ ಮೂಲಕ ಕರ್ನಾಟಕದ ಕಲಾ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು.

ಯುವ ಕಲಾವಿದನ ಅಕಾಲಿಕ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.



Ads on article

Advertise in articles 1

advertising articles 2

Advertise under the article