-->
 ಅಮೇರಿಕಾದಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಬಲಿ

ಅಮೇರಿಕಾದಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಬಲಿ


ಅಮೆರಿಕಾದ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ದುಷ್ಕರ್ಮಿಯೊಬ್ಬ ಅಮಾಯಕರ ಮೇಲೆ ನಡೆಸಿದ ಗುಂಡಿನ ದಾಳಿಯಿಂದ ಮೃತಪಟ್ಟವರ ಪೈಕಿ ಒಬ್ಬ ಭಾರತೀಯ ಮೂಲದ ವಿದ್ಯಾರ್ಥಿನಿಯೂ ಸೇರಿದ್ದಾರೆ.

ಇರಾನ್ ಧ್ವಜದ ಚಿಹ್ನೆ ಧರಿಸಿದ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟ ಭಾರತೀಯ ಮೂಲದ ವಿದ್ಯಾರ್ಥಿನಿಯನ್ನು ಸವಿತಾ ಶಾನ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಈ ಘಟನೆಯಲ್ಲಿ ಇತರೆ 14 ಜನರು ಗಾಯಗೊಂಡಿದ್ದಾರೆ. ದಾಳಿಕೋರ ಸೆನೆಗಲ್‌ನ ವಲಸೆಗಾರ 53 ವರ್ಷದ ನ್ಡಿಯಾಗಾ ಡಯಾಗ್ನೆ ಎಂಬಾತನಿಗೆ ಭಯೋತ್ಪಾದಕ ಚಟುವಟಿಕೆಗಳ ಸಂಬಂಧವಿರುವ ಮಾಹಿತಿ ಇದ್ದು, ತನಿಖೆ ನಡೆಸುವುದಾಗಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ)ನ ಆಕ್ಟಿಂಗ್ ಸ್ಪೆಷಲ್ ಏಜೆಂಟ್ ಅಲೆಕ್ಸ್ ಡೋರನ್ ತಿಳಿಸಿದ್ದಾರೆ.

ವಿದ್ಯಾರ್ಥಿನಿಯ ಸಾವನ್ನು ಟೆಕ್ಸಾಸ್ ವಿವಿಯ ಅಧ್ಯಕ್ಷ ಜಿಮ್ ಡೇವಿಸ್ ದೃಢಪಡಿಸಿದ್ದು, ಇಮೇಲ್ ಮೂಲಕ ತಮ್ಮ ಕ್ಯಾಂಪಸ್ ಸಮುದಾಯಕ್ಕೆ ಮಾಹಿತಿ ನೀಡಿದ್ದಾರೆ. ಮೃತ ಸವಿತಾ ಶಾನ್ ಅವರು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಗಳಲ್ಲಿ ಬ್ಯಾಚುಲರ್ ಪದವಿ ಪಡೆಯುತ್ತಿದ್ದರು. ಈ ವರ್ಷ ಪದವಿ ಪಡೆಯುವ ನಿರೀಕ್ಷೆ ಹೊಂದಿದ್ದರು. ಇದಲ್ಲದೇ ಆಸ್ಟಿನ್ ತಮಿಳು ಸಂಗಮ್‌ನಲ್ಲಿ ಸ್ವಯಂಸೇವಕರಾಗಿದ್ದರು ಎಂದು ತಿಳಿದು ಬಂದಿದೆ.

ಅಮೆರಿಕ ಮತ್ತು ಇಸ್ರೇಲ್ ಶನಿವಾರ ಇರಾನ್ ಮೇಲೆ ಸೇನಾ ಕಾರ್ಯಾಚರಣೆ ಆರಂಭಿಸಿದ ನಂತರ ಭಯೋತ್ಪಾದನೆಯ ಆತಂಕದಿAದ ಅಮೆರಿಕದಾದ್ಯಂತ ಕಾನೂನು ಜಾರಿ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.


 

Ads on article

Advertise in articles 1

advertising articles 2

Advertise under the article