-->
ಅಲೆವೂರು ನೆಹರೂ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎ. ವಾಮನ ಭಟ್ ನಿಧನ

ಅಲೆವೂರು ನೆಹರೂ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎ. ವಾಮನ ಭಟ್ ನಿಧನ


ಉಡುಪಿ ತಾಲೂಕು ಅಲೆವೂರಿನ ನೆಹರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ಎ. ವಾಮನ ಭಟ್ ಇಂದು ಬೆಳಿಗ್ಗೆ ನಿಧನ ಹೊಂದಿದರು. 

ಅವರಿಗೆ 80 ವರ್ಷ ವಯಸ್ಸಾಗಿತ್ತು. ಗಣಿತ ಶಿಕ್ಷಕರಾಗಿದ್ದ ಅವರು ದಶಕಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನೆಹರೂ ಹೈಸ್ಕೂಲಿಗೆ ಒಳ್ಳೆಯ ಹೆಸರು ತಂದಿದ್ದರು. 

ಅಲೆವೂರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಓರ್ವ ಪುತ್ರ (ಡಾ. ಸುದರ್ಶನ್ ಭಟ್), ಓರ್ವ ಪುತ್ರಿ ಹಾಗೂ ಅಪಾರ ವಿದ್ಯಾರ್ಥಿ ವರ್ಗ, ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು ಅವರ ಅಲೆವೂರಿನ ಸ್ವಗೃಹದಲ್ಲಿ ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ.

Ads on article

Advertise in articles 1

advertising articles 2

Advertise under the article