-->
 ಮಾ.1: 'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಪೊಲೀಸ್ ರನ್

ಮಾ.1: 'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಪೊಲೀಸ್ ರನ್


ಕರ್ನಾಟಕ ರಾಜ್ಯ ಪೊಲೀಸ್ ಪಡೆಯ ಗೌರವಾರ್ಥ ಮಾ.1 ರಂದು ರಾಜ್ಯಾದ್ಯಂತ ಆರೋಗ್ಯ ಮತ್ತು ಸಾಮಾಜಿಕ ಜಾಗೃತಿಗಾಗಿ 'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಘೋಷವಾಕ್ಯದಡಿ ಬೃಹತ್ ಓಟವನ್ನು ಆಯೋಜಿಸಲಾಗಿದೆ. 


ಉಡುಪಿ ಜಿಲ್ಲೆಯಲ್ಲೂ ಮಾರ್ಚ್ 1ರ ಬೆಳಗ್ಗೆ 6 ಗಂಟೆಗೆ ಮ್ಯಾರಾಥಾನ್ ನಡೆಯಲಿದೆ. ಅಜ್ಜರಕಾಡು ಕ್ರೀಡಾಂಗಣದಲ್ಲಿ 5ಕಿಲೋ ಮೀಟರ್ ಮ್ಯಾರಥಾನ್‌ಗೆ ಚಾಲನೆ ಸಿಗಲಿದೆ.  ಫೆಬ್ರವರಿ 27ರ ಮಧ್ಯಾಹ್ನ 2 ಗಂಟೆವರೆಗೆ ಹೆಸರು ನೋಂದಾಯಿಸಲು ಅವಕಾಶವಿದೆ. ಅಲ್ಲದೇ ಮಾ. 1ರ ಬೆಳಗ್ಗೆ 5.30ರಿಂದ ಸ್ಥಳದಲ್ಲೇ ನೋಂದಾವಣೆ ಮಾಡಿಕೊಳ್ಳಬಹುದು. 12 ವರ್ಷದಿಂದ 39 ವರ್ಷದವರೆಗಿನ ಸಾರ್ವಜನಿಕರು, 40 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ, ಪೊಲೀಸ್ ಸಿಬ್ಬಂದಿಗಳು ಹಾಗೂ ಬ್ಯಾಂಕ್ (ಎಸ್‌ಬಿಐ ಹಾಗೂ ಬ್ಯಾಂಕ್ ಆಫ್ ಬರೋಡಾ)ಸಿಬ್ಬಂದಿಗಳಿಗೆ 4 ವಿಭಾಗಗಳಲ್ಲಿ ಓಟವನ್ನು ಹಮ್ಮಿಕೊಳ್ಳಲಾಗಿದೆ. 

Ads on article

Advertise in articles 1

advertising articles 2

Advertise under the article