-->
ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅನಾಥ ಶವಗಳ ಅಂತ್ಯಸಂಸ್ಕಾರ (Video)

ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅನಾಥ ಶವಗಳ ಅಂತ್ಯಸಂಸ್ಕಾರ (Video)


ಕಳೆದ 45 ದಿನಗಳಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ, ಎರಡು ಅಪರಿಚಿತ ಶವಗಳ ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 

ಉಡುಪಿ ಜಿಲ್ಲಾಸ್ಪತ್ರೆಯ ಡಾ. ರಮೇಶ್ ಕುಂದರ್ ಮರಣೋತ್ತರ ಪರೀಕ್ಷೆ, ಹಾಗೂ ನಗರ ಪೋಲಿಸ್ ಠಾಣೆಯ ಎ ಎಸ್ ಐ ತಾರಾನಾಥ್,  ತನಿಖಾ ಸಹಾಯಕ ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು.

ಅಜ್ಜರಕಾಡು  ಜಿಲ್ಲಾಸ್ಪತ್ರೆಯಲ್ಲಿ ನೇಪಾಳದ ಪ್ರಜೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಹಾಗೂ ಸಾರ್ವಜನಿಕ ಸ್ಥಳದಲ್ಲಿ  ಗಂಡಸಿನ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಇವರೆಡು ಶವಗಳ ಅಂತ್ಯಸAಸ್ಕಾರವನ್ನು ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತ್ರತ್ವದಲ್ಲಿ ನಡೆಸಲಾಯಿತು. ಈ ವೇಳೆ ವಿಕಾಸ್ ಶೆಟ್ಟಿ, ಪ್ಲವರ್ ವಿಷ್ಣು, ಸಾಜಿ ಕುಮಾರ್, ಹರೀಶ್ ಪೂಜಾರಿ, ಸಚಿನ್ ಮಲ್ಪೆ ನೆರವಾದರು. 



Ads on article

Advertise in articles 1

advertising articles 2

Advertise under the article