-->
 ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಅರುಣ್ ಶೆಟ್ಟಿ ಆಯ್ಕೆ

ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಅರುಣ್ ಶೆಟ್ಟಿ ಆಯ್ಕೆ


ಉಡುಪಿ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಲಿ. ಕಿನ್ನಿಮುಲ್ಕಿ ಇದರ ಮುಂದಿನ 5 ವರ್ಷಗಳ ಆಡಳಿತ ಅವಧಿಗೆ ಅಧ್ಯಕ್ಷರಾಗಿ ಅರುಣ ಕುಮಾರ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಎಂ. ಗಣೇಶ್ ಕಿಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಉಡುಪಿ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಲಿ. ಕಿನ್ನಿಮುಲ್ಕಿ ಇದರ ನಿರ್ದೇಶಕರಾಗಿ ಇಂದು ರಮಾನಂದ ಭಟ್, ಕೆ. ನಾರಾಯಣ ಬಲ್ಲಾಳ್, ಎಲ್. ಉಮಾನಾಥ್, ದೇವದಾಸ್ ಶೆಟ್ಟಿಗಾರ್, ಯಶವಂತ ನಾಯಕ್, ರಾಧಾಕೃಷ್ಣ ಶೆಣೈ, ಮೀನಾ ಕುಮಾರಿ ಯು, ಶ್ವೇತಾ ಜೆ. ಶೆಟ್ಟಿ, ಅಬ್ದುಲ್ಲಾ ಎಚ್. ಸಾಹೇಬ್, ಅರುಣ್ ಟಿ. ಶೆಟ್ಟಿ, ಸುರೇಶ್ ನಾಯ್ಕ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಆಫೀಸರ್ ಕೆ. ಆರ್. ರೋಹಿತ್‌ ನೆರವೇರಿಸಿಕೊಟ್ಟರು.

ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಹೆಗ್ಡೆ ಸಹಕರಿಸಿದರು.

 

Ads on article

Advertise in articles 1

advertising articles 2

Advertise under the article