-->
 ಕುಣಿತ ಭಜನೆ ವೇಳೆ ಕುಸಿದು ಬಿದ್ದು ಮಹಿಳೆ ಸಾವು

ಕುಣಿತ ಭಜನೆ ವೇಳೆ ಕುಸಿದು ಬಿದ್ದು ಮಹಿಳೆ ಸಾವು


ದೇವಸ್ಥಾನದ ಜಾತ್ರೋತ್ಸವದ ವೇಳೆ ಕುಣಿತ ಭಜನೆ ಮಾಡುತ್ತಿದ್ದ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನಪ್ಪಿದ ಘಟನೆ ಪುತ್ತೂರಿನ ಈಶ್ವರಮಂಗಲ ಸಮೀಪ ನಡೆದಿದೆ. 

ಸುಳ್ಯಪದವು ಮಹಾಲಕ್ಷ್ಮಿ ವನಿತಾ ಭಜನ ಮಂಡಳಿಯ ಸದಸ್ಯೆ ರತ್ನಾವತಿ ಬಾಳಪ್ಪ ಪೂಜಾರಿ ಕನ್ನಡ್ಕ (63) ಮೃತರು. ಕಾವು ಮುತ್ತು ಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದಲ್ಲಿ ಸುಳ್ಯಪದವು ಮಹಾಲಕ್ಷ್ಮಿ ವನಿತಾ ಭಜನ ಮಂಡಳಿಯ ಕುಣಿತ ಭಜನೆ ಕಾರ್ಯಕ್ರಮದಲ್ಲಿ ರತ್ನಾವತಿ ಬಾಳಪ್ಪ ಪೂಜಾರಿ ಭಾಗವಹಿಸಿದ್ದರು. ಈ ವೇಳೆ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆ ಕರೆದೊಯ್ಯಲಾಯಿತಾದರೂ ಅಲ್ಲಿಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು. ಸಾವಿಗೆ ಹೃದಯಾಘಾತ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. 


 

Ads on article

Advertise in articles 1

advertising articles 2

Advertise under the article