-->
 ವಿನಯಕುಮಾರ್ ಸೊರಕೆ ಒತ್ತಡದಿಂದಲೇ ಕಂಬಳಕ್ಕೆ ಗುದ್ದಲಿಪೂಜೆ ನೆರವೇರಿಸಿರುವವರ ವಿರುದ್ಧ ಕೇಸ್; ಕೋಟ ಶ್ರೀನಿವಾಸ ಪೂಜಾರಿ (Video)

ವಿನಯಕುಮಾರ್ ಸೊರಕೆ ಒತ್ತಡದಿಂದಲೇ ಕಂಬಳಕ್ಕೆ ಗುದ್ದಲಿಪೂಜೆ ನೆರವೇರಿಸಿರುವವರ ವಿರುದ್ಧ ಕೇಸ್; ಕೋಟ ಶ್ರೀನಿವಾಸ ಪೂಜಾರಿ (Video)


ಕಾಪು ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಒತ್ತಡದಿಂದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಕಂಬಳಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 

ಕಂಬಳಕ್ಕೆ ಮೀಸಲಿಟ್ಟ ಜಾಗದಲ್ಲಿ ನಿಷೇಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶಾ ಮಾಡಿದ್ದೀರಿ ಎಂದು ಹೇಳುವ ನಿಮಗೆ ನಿಷೇಧಾಜ್ಞೆ ಹೊರಡಿಸಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಕಾನೂನು ಬದ್ಧವಾಗಿಯೇ ಕಂಬಳ ಸಮಿತಿ ರಚನೆಯಾಗಿದೆ. ಆದರೆ ಉಡುಪಿ ಎಸ್ಪಿ ಅವರು ಕಂಬಳ ಗುದ್ದಲಿ ಪೂಜೆ ನೆರವೇರಿಸಿದ ಕರಾವಳಿಯ ಎಲ್ಲ ಶಾಸಕರು ಜನಪ್ರತಿನಿಧಿಗಳು ಸಹಿತ 37 ಜನರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಕಾನೂನಿನ ಬೆದರಿಕೆಯೊಡ್ಡಿದ್ದಾರೆ. ಇದು ಅತ್ಯಂತ ಕೆಟ್ಟ ಪರಂಪರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.




Ads on article

Advertise in articles 1

advertising articles 2

Advertise under the article