ಅಭಿವೃದ್ಧಿ ವಿಚಾರದಲ್ಲಿ ಅಡಿಗಡಿಗೆ ವಿಘ್ನ; ರಾಂಗ್ ಟೈಮ್ ಎಂಎಲ್ಎ ಆಗಿದ್ದೇನೆ- ಗುರ್ಮೆ ಸುರೇಶ್ ಶೆಟ್ಟಿ
Saturday, February 28, 2026
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತನಗೆ ಅಡಿಗಡಿಗೆ ವಿಘ್ನ ಬರುತ್ತಿದ್ದು, ರಾಂಗ್ ಟೈಮ್ ಎಂಎಲ್ಎ ಆಗಿದ್ದೇನೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಷಾದ ವ್ಯಕ್ತಪಡಿಸಿದ್ದಾರೆ.
ಬಡಗುಬೆಟ್ಟುವಿನಲ್ಲಿ ಕಂಬಳಕರೆಗೆ ಗುದ್ದಲಿ ಪೂಜೆ ನೆರವೇರಿಸುವ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು. ಅನುದಾನ ನೀಡುವ ವಿಚಾರದಲ್ಲಿ ಕರಾವಳಿಯನ್ನು ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ತಾರತಮ್ಯ ಮಾಡುತ್ತಿದ್ದು, ತನ್ನ ವಿರುದ್ಧ ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಂಬಳಕ್ಕೆ ಗುದ್ದಲಿ ಪೂಜೆ ನೆರವೇರಿಸುವ ವಿಚಾರದಲ್ಲೂ ಅನಗತ್ಯ ಗೊಂದಲ ಸೃಷ್ಟಿಸಿದ್ದು, ಒಂದು ವೇಳೆ ಉಡುಪಿ ಕಂಬಳ ನಿಂತರೆ ಅದಕ್ಕೆ ವಿನಯಕುಮಾರ್ ಸೊರಕೆ ಅವರೇ ನೇರ ಹೊಣೆ ಎಂದರು.