-->
ಟ್ರಕ್ಕಿಂಗ್ ವೇಳೆ ನದಿಯಲ್ಲಿ ಮುಳುಗಿ ಮಹಿಳೆ ಸಾವು

ಟ್ರಕ್ಕಿಂಗ್ ವೇಳೆ ನದಿಯಲ್ಲಿ ಮುಳುಗಿ ಮಹಿಳೆ ಸಾವು


ಹೊಸಂಗಡಿಯ ಭಾಗಿಮನೆ ಬಳಿ ಟ್ರಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕುಂದಾಪುರ ಮಯೂರ ಮೆಡಿಕಲ್ ಮಾಲಕಿ ಶುಭಶ್ರೀ ಕಾರಂತ್ (53) ಸಾವನ್ನಪ್ಪಿದವರು. 

ಶುಭಶ್ರೀ ಕಾರಂತ್ ಕುಂದಾಪುರ ಚಿಕ್ಕನಸಾಲ್ ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನದ ಬಳಿಯ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಕುಂದಾಪುರದ ಮುಖ್ಯ ರಸ್ತೆಯಲ್ಲಿರುವ ಪನ್ನಿರ್ ಜ್ಯುವೆಲರ್ಸ್ ಎದುರುಗಡೆಯಲ್ಲಿ ಮೆಡಿಕಲ್ ಶಾಪ್ ನಡೆಸುತಿದ್ದರು.

ಕುಂದಾಪುರದಿಂದ 8-10 ಜನರ ತಂಡ ಹೊಸಂಗಡಿಯ ಮೆಟ್ಕಲ್ ಗುಡ್ಡ ಕಡೆಗೆ ಟ್ರಕ್ಕಿಂಗ್ ಹೋಗಿದ್ದ ವೇಳೆ ಅವಘಡ ನಡೆದಿದೆ. ಮೃತದೇಹವನ್ನು‌ ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article