-->
 ಕೊಡವೂರು ಇಂದ್ರಾಣಿ ನದಿಯಲ್ಲಿ ವ್ಯಕ್ತಿಯ ಶವ ಪತ್ತೆ (Video)

ಕೊಡವೂರು ಇಂದ್ರಾಣಿ ನದಿಯಲ್ಲಿ ವ್ಯಕ್ತಿಯ ಶವ ಪತ್ತೆ (Video)



ಮನೆಯಿಂದ ನಾಪತ್ತೆಯಾಗಿದ್ದ  ಸುಬ್ರಹ್ಮಣ್ಯನಗರ ಅಂಬಾಗಿಲಿನ ನಿವಾಸಿ ಸುರೇಶ್ ಪೂಜಾರಿ(54) ಎಂಬವರ ಶವವು ಕೊಡವೂರು ಶಂಕರನಾರಾಯಣ ದೇವಸ್ಥಾನದ ಹಿಂದುಗಡೆ ಡ್ರೈನೇಜ್ ನೀರು ಹರಿಯುವ ಇಂದ್ರಾಣಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಸುರೇಶ್ ಪೂಜಾರಿ ಅವರು ಕೆಲವು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದ್ರಾಣಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಮೇಲಕ್ಕೆತ್ತಲಾಯಿತು. ಮಲ್ಪೆಯ ಶಬೀರ್, ಮುಸ್ತಾಕ್ ನೆರವಾದರು. ಮಲ್ಪೆ ಪೋಲಿಸ್ ಠಾಣೆಯ ಎ.ಎಸ್. ಐ ಹರೀಶ್ ಕೆ ಅವರು ಮಹಜರು ಪ್ರಕ್ರಿಯೆ ನಡೆಸಿದರು. 




 

Ads on article

Advertise in articles 1

advertising articles 2

Advertise under the article