-->
 ಮಾ.13 ರಿಂದ 15: ಉಡುಪಿಯಲ್ಲಿ ಮುರಾರಿ- ಕೆದ್ಲಾಯ ರಂಗೋತ್ಸವ

ಮಾ.13 ರಿಂದ 15: ಉಡುಪಿಯಲ್ಲಿ ಮುರಾರಿ- ಕೆದ್ಲಾಯ ರಂಗೋತ್ಸವ


ರಥಬೀದಿ ಗೆಳೆಯರು (ರಿ) ಉಡುಪಿ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ವರ್ಷಂಪ್ರತಿ ಜರಗುವ ಪ್ರತಿಷ್ಠಿತ ಮುರಾರಿ - ಕೆದ್ಲಾಯ ರಂಗೋತ್ಸವವು ಮಾರ್ಚ್ 13ರಿಂದ 15 ರವರೆಗೆಪ್ರತಿದಿನ ಸಂಜೆ 6.30ಕ್ಕೆ ಉಡುಪಿ ಎಂ.ಜಿ.ಎO.ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದೆ. 

ಮಾರ್ಚ್ 13 ಶುಕ್ರವಾರ ಸಂಜೆ ಗಂಟೆ 5.45ಕ್ಕೆ ರಂಗೋತ್ಸವವನ್ನು ಮೈಸೂರು ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉಡುಪಿ ಎಂ.ಜಿ.ಎO.ಕಾಲೇಜು ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ ಭಾಗವಹಿಲಿದ್ದಾರೆ.

ಸಭಾಕಾರ್ಯಕ್ರಮದ ನಂತರ ರಂಗಾಯಣ ಮೈಸೂರು ರೆಪರ್ಟರಿ ಕಲಾವಿದರಿಂದ ಅಂಬೇಡ್ಕರ್ ಕೊಲಾಜ್ (ರಚನೆ : ಕೋಟಿಗಾನ ಹಳ್ಳಿ ರಾಮಯ್ಯ,ನಿರ್ದೇಶನ :ಚಿದಂಬರರಾವ್ ಜಂಬೆ ) ನಾಟಕ ಪ್ರದರ್ಶನಗೊಳ್ಳಲಿದೆ.

ಮಾರ್ಚ್ 14ರಂದು ಸಮುದಾಯ ಶಿವಮೊಗ್ಗ ಕಲಾವಿದರಿಂದ  ನೀರೊಳಗಣ ಕಿಚ್ಚು (ರಂಗರೂಪ: ಡಾ.ಸಾಸ್ವೇಹಳ್ಳಿ ಸತೀಶ್, ಐಕೆ. ಬೊಳುವಾರು ನಿರ್ದೇಶನ: ಡಾ.ಸಾಸ್ವೇಹಳ್ಳಿ ಸತೀಶ್) ಮತ್ತು ಮಾರ್ಚ್ 15ರಂದು ಸಮುದಾಯ ಬೆಂಗಳೂರು ಕಲಾವಿದರಿಂದ  ಭಗವಂತನ_ಮರಣ (ಮಲಯಾಳಂ ಮೂಲ ಕತೆ: ಕೆ.ಆರ್ ಮೀರಾ .ಕನ್ನಡಕ್ಕೆ : ಕೆ. ಪ್ರಭಾಕರನ್ ರಂಗರೂಪ/ನಿರ್ದೇಶನ: ಡಾ.ಸ್ಯಾಮ್ ಕುಟ್ಟಿ ಪಟ್ಟಂಕರಿ) ನಾಟಕಗಳು ಪ್ರದರ್ಶನಗೊಳ್ಳಲಿದೆ.

ವಿಭಿನ್ನ ಶೈಲಿಯ ವಿಭಿನ್ನ ಕಥಾವಸ್ತುವಿನ ಈ ಮೂರೂ ನಾಟಕಗಳು ಉಡುಪಿಯಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ. ರಂಗಾಸಕ್ತರು ಆಗಮಿಸಿ ರಂಗಾನುಭವವನ್ನು ಪಡೆದು ಕೊಳ್ಳ ಬೇಕು ಎಂದು  ಸಂಸ್ಥೆಯ ನಾಟಕ ವಿಭಾಗದ ಸಂಚಾಲಕರಾದ ಸಂತೋಷ್ ಶೆಟ್ಟಿ ಹಿರಿಯಡ್ಕ ಮತ್ತು ಸಂತೋಷ್ ನಾಯಕ್ ಪಟ್ಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


 

Ads on article

Advertise in articles 1

advertising articles 2

Advertise under the article