ನಿವೇಶನರಹಿತರಿಗೆ ಇಲ್ಲದ ಸರ್ಕಾರಿ ಜಾಗ ಕಂಬಳಕ್ಕೆ ಮೀಸಲಿಡಲು ಇತ್ತೇ ?- ಶ್ಯಾಮರಾಜ್ ಬಿರ್ತಿ ಪ್ರಶ್ನೆ
ಉಡುಪಿ ಜಿಲ್ಲೆಯಲ್ಲಿ ಸ್ವಂತ ನಿವೇಶನ, ಸ್ವಂತ ಮನೆ, ಸ್ವಂತ ಬಾವಿ , ಉದ್ಯೋಗ ಇಲ್ಲದೇ ಲಕ್ಷಾಂತರ ಮೂಲ ನಿವಾಸಿಗಳು ಹಾಗೂ ಬಡವರು ದಯನೀಯ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಹಲವಾರು ದಶಕಗಳಿಂದ ಮನೆಕಟ್ಟಲು ನಿವೇಶನ ಕೊಡಿ ಎಂಬ ಬೇಡಿಕೆ ಮುಂದಿಟ್ಟುಕೊOಡು ಚಳುವಳಿ ನಡೆಸುತ್ತಲೇ ಬಂದಿದ್ದರೂ ಜನಪ್ರತಿನಿಧಿಗಳು ಕಿವುಡರಾಗಿ, ಕುರುಡರಾಗಿ ವರ್ತಿಸಿದ್ದಾರೆ. ಆದೆರ ಈಗ ಜನ ಪ್ರತಿನಿಧಿಗಳು ಕಂಬಳಕ್ಕೆ ಜಾಗಕೊಡಿ ಎಂದು ಕೂಗಾಡುವುದು, ನಿಷೇಧಾಜ್ಞೆಯನ್ನೂ ಉಲ್ಲಂಘಿಸಿ ಗುದ್ದಲಿ ಪೂಜೆ ನೆರವೇರಿಸುವುದು ಜನಪ್ರತಿನಿದಿನಗಳ ನೈತಿಕ ಅಧಃಪತನ ಹಾಗೂ ಯೋಗ್ಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರು ನೂರಾರು ವರ್ಷಗಳಿಂದ ಸ್ವಂತ ಸೂರಿಲ್ಲದೇ, ಸ್ವಂತ ನಿವೇಶನ ಇಲ್ಲದೇ , ತಮ್ಮ ಪೂರ್ವಜರ ಮನೆಯೊಳಗೆ ಹಲವಾರು ಕುಟುಂಬಗಳು ಒಟ್ಟಿಗೇ ಟಾರ್ಪಾಲು ಹಾಸಿಕೊಂಡು ಬಧುಕುತ್ತಿರುವುದು ಈ ಜನಪ್ರತಿನಿದಿನಗಳಿಗೆ ಕಣ್ಣಾರೆ ಕಂಡರೂ 80 ಬಡಗುಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 13 ಎಕರೆ ಸರಕಾರಿ ಜಾಗದಲ್ಲಿ ” ಉಡುಪಿ ಕಂಬಳ ” ಎಂಬ ಒಂದು ಹೊಸ ಸಂಪ್ರದಾಯ ಹುಟ್ಟುಹಾಕಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನಪ್ರತಿನಿದಿಗಳು ಪೈಪೋಟಿಗೆ ಬಿದ್ದವರಂತೆ ಜನರ ಮೂಲಭೂತ ಸಮಸ್ಯೆಗಳನ್ನು ಕಡೆಗಣಿಸಿ ಸರ್ವೆ ನಂ. 11/1 ರಲ್ಲಿ 6-30 ಎಕರೆ ಜಾಗದಲ್ಲಿ ಕಂಬಳಕ್ಕೆ ಗುಧ್ಧಲಿ ಪೂಜೆ ನೆರವೇರಿಸಿದ್ದು ನಾಚಿಕೆಗೇಡಿನ ಸಂಗತಿ.
ಅಷ್ಟಕ್ಕೂ ಈ ಕಂಬಳ ಎನ್ನುವುದು ಜನರ ಅಭಿವೃದ್ಧಿ ಕಾರ್ಯವೇ ? ಇಲ್ಲಾ ಜನರ ಮೂಲಭೂತ ಅವಶ್ಯಕತೆಯೇ ? ಶ್ರೀಮಂತ ಗುತ್ತಿನ ಮನೆಯವರ ಗತ್ತಿನ ಸಂಕೇತವಾದ ಕಂಬಳದಿAದ ಪ್ರತೀ ದಿನ ಕೂಲಿಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಬಹುಸಂಖ್ಯಾತ ಜನರಿಗೆ ಆಗುವ ಪ್ರಯೋಜನವಾದರೂ ಏನು ? ಕಂಬಳದಿOದ ಸಾಹುಕಾರರ ಸ್ವಪ್ರತಿಷ್ಟೆಯ ಪ್ರದರ್ಶನಕ್ಕೆ ವೇಧಿಕೆಯಾಗಬಹುದೇ ಹೊರತು, ಬಡವರ ಹಸಿವು ನೀಗಿಸುವುದಿಲ್ಲಾ ಎಂದು ಕಿಡಿ ಕಾರಿದರು.
ಕಂಬಳ ಜಾನಪದ ಕ್ರೀಡೆ ಇದಕ್ಕೆ ಜಾಗ ಕೊಡಿ ಎನ್ನುವ ಜನಪ್ರತಿನಿದಿನಗಳು ನಾಳೆಯ ದಿನ ಹಳ್ಳಿ ಹಳ್ಳಿಗಳಲ್ಲಿ ಜೂಜು ಕಟ್ಟಿ ಕೋಳಿ ಅಂಕವಾಡುವ, ಕಾದಾಟವಾಡಿ ಕಾದಾಡುತ್ತಲೇ ಅಮಾನುಷವಾಗಿ ಜೀವ ತೆರುವ ಕೋಳಿ ಅಂಕ ನಮ್ಮ ಜಾನಪದ ಕ್ರೀಡೆ ಅದಕ್ಕೂ ಪ್ರತೀ ಹಳ್ಳಿಯಲ್ಲೂ ಒಂದು ಎಕರೆ ಭೂಮಿಗೆ ಗುದ್ದಲಿ ಪೂಜೆ ಮಾಡಿದರೂ ಆಶ್ಚರ್ಯವಿಲ್ಲ ಎಂದು ಕಿಡಿಕಾರಿದರು.
ಜಿಲ್ಲಾಡಳಿತ ಬಡವರಿಗೆ ನಿವೇಶನ ಕೊಡುವತ್ತಾ ಗಮನಹರಿಸಿ ಈ ಕಾಂಗ್ರೆಸ್ , ಬಿಜೆಪಿಯವರ ಕೆಸರೆರಚಾಟದ ಕಂಬಳಕ್ಕೆ ಆಧ್ಯತೆ ಕೊಡುವ ಮೊದಲು ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಮೊದಲ ಆಧ್ಯತೆ ಶ್ಯಾಮರಾಜ್ ಬಿರ್ತಿ ಆಗ್ರಹಿಸಿದ್ದಾರೆ.