ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯ ರಕ್ಷಣೆ (Video)
Tuesday, March 10, 2026
ಉಡುಪಿಯ ಸಿಟಿ ಬಸ್ಸು ನಿಲ್ದಾಣದ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧೆಯೊಬ್ಬರನ್ನು ನಿತ್ಯಾನಂದ ಒಳಕಾಡು ಅವರು ರಕ್ಷಿಸಿದ್ದಾರೆ.
ವೃದ್ಧೆಯ ಅಸಹಾಯಕ ಸ್ಥಿತಿಯನ್ನು ಗಮನಿಸಿದ ಗಣೇಶ್ ಸುವರ್ಣ ಎನ್ನುವರು ಸಮಾಜಸೇವಕ ನಿತ್ಯಾನಂದ ಒಳಕಾಡುವರ ಗಮನಕ್ಕೆ ತಂದಿದ್ದರು.ತಕ್ಷಣ ನೆರವಿಗೆ ಬಂದ ನಿತ್ಯಾನಂದ ಒಳಕಾಡು ಅವರು, ವೃದ್ಧೆಯನ್ನು ರಕ್ಷಿಸಿ, ಅವರಿಗೆ ಉದ್ಯಾವರ ಹಿರಿಯ ನಾಗರಿಕರ ಕನಸಿನ ಮನೆಯಲ್ಲಿ ಪುರ್ನವಸತಿ ಕಲ್ಪಿಸಿದ್ದಾರೆ. ಕಾರ್ಯಚರಣೆಗೆ ನಗರ ಪೋಲಿಸ್ ಠಾಣೆಯ ಸಿಬ್ಬಂದಿಗಳು, ಕನಸಿನ ಮನೆಯ ಮೇಲ್ವಿಚಾರಕಿ ಅಕ್ಷತಾ ನೆರವಾಗಿದ್ದರು. ವೃದ್ಧೆ ಹೆಸರು ವಿಜಯ ಶೆಣೈ ಎಂದಷ್ಟೆ ಹೇಳಿಕೊಂಡಿದ್ದಾರೆ. ವಾರಿಸುದಾರರು ಉದ್ಯಾವರ ಹಿರಿಯ ನಾಗರಿಕರ ಕನಸಿನ ಮನೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.