-->
 ಆಕಸ್ಮಿಕವಾಗಿ ಬಿದ್ದು ಮಹಿಳೆ ಮೃತ್ಯು

ಆಕಸ್ಮಿಕವಾಗಿ ಬಿದ್ದು ಮಹಿಳೆ ಮೃತ್ಯು


ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. 

ಮೃತಪಟ್ಟವರನ್ನು ಕೊಣಾಲು ಗ್ರಾಮದ ಪಾತೃಮಾಡಿ ನಿವಾಸಿ 64 ವರ್ಷದ ಲೀಲಾವತಿ ಶೆಟ್ಟಿ ಎಂದು ಗುರುತಿಸಲಾಗಿದೆ. 

ಮಾರ್ಚ್ 11ರಂದು ಸಂಜೆ ತಮ್ಮ ತೋಟದಲ್ಲಿ ಆಕಸ್ಮಿಕವಾಗಿ ನೆಲಕ್ಕೆ ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ಲೀಲಾವತಿ ಅವರ ಪುತ್ರ ಹರೀಶ್ ಲಾರಿ ಚಾಲಕರಾಗಿದ್ದು, ಆ ದಿನ ರಾತ್ರಿ ಮನೆಗೆ ಬಂದಾಗ ಮನೆ ಬಾಗಿಲು ತೆರೆದಿರುವುದು ಕಂಡುಬOದಿದೆ. ಆದರೆ ತಾಯಿ ಮನೆಯಲ್ಲಿ ಕಾಣಿಸದ ಹಿನ್ನೆಲೆಯಲ್ಲಿ ಆತಂಕಗೊAಡ ಅವರು ನೆರೆಮನೆಯವರ ಸಹಾಯದಿಂದ ಹುಡುಕಾಟ ಆರಂಭಿಸಿದ್ದಾರೆ. ನಂತರ ತಮ್ಮ ತೋಟದಲ್ಲಿ ಲೀಲಾವತಿ ಶೆಟ್ಟಿ ಅವರು ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಮೃತರ ಒಂದು ಕೈಯಲ್ಲಿ ಕಲ್ಲು ಹಾಗೂ ಇನ್ನೊಂದು ಕೈಯಲ್ಲಿ ದೊಣ್ಣೆ ಇದ್ದು, ಜಾನುವಾರುಗಳನ್ನು ಓಡಿಸುವ ವೇಳೆ ಆಕಸ್ಮಿಕವಾಗಿ ಬಿದ್ದಾಗ ಕೈಯಲ್ಲಿದ್ದ ಕಲ್ಲು ಹಣೆಗೆ ತಾಗಿ ಗಂಭೀರ ಗಾಯಗೊಂಡಿರಬಹುದು ಎಂದು ಶಂಕಿಸಲಾಗಿದೆ. 


Ads on article

Advertise in articles 1

advertising articles 2

Advertise under the article