-->
 ಉಡುಪಿ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ಆನ್‌ಲೈನ್ ನೋಂದಣಿ

ಉಡುಪಿ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ಆನ್‌ಲೈನ್ ನೋಂದಣಿ


ಉಡುಪಿಯ ಕೇಂದ್ರೀಯ ವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಯ ಪ್ರವೇಶಕ್ಕಾಗಿ ಆನ್‌ಲೈನ್ ನೋಂದಣಿಯು ದಿನಾಂಕ 20.03.2026 ರಿಂದ ಪ್ರಾರಂಭವಾಗಿ 02.04.2026 ರಂದು ಮುಕ್ತಾಯಗೊಳ್ಳಲಿದೆ. 

ಪ್ರವೇಶದ ವಿವರಗಳು https://kvsangathan.nic.in/en/admission  ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, 1ನೇ ತರಗತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್ https://admission.kvs.gov.in.  1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯಸ್ಸು 6 ವರ್ಷಗಳಾಗಿದ್ದು, ಎಲ್ಲಾ ತರಗತಿಗಳಿಗೆ ವಯಸ್ಸಿನ    ಲೆಕ್ಕಾಚಾರವು 31.03.2026 ರಂತೆ ಇರುತ್ತದೆ. ಸೀಟುಗಳ ಕಾಯ್ದಿರಿಸುವಿಕೆಯು 2026-27 ರ KVS ಪ್ರವೇಶ ಮಾರ್ಗಸೂಚಿಗಳ ಪ್ರಕಾರ ಇರುತ್ತದೆ.

1 ನೇ ತರಗತಿಯಲ್ಲಿ ಒಟ್ಟು 80 ಸೀಟುಗಳಿದ್ದು, (20 RTE). 2ನೇ ತರಗತಿಯಿಂದ 5ನೇ ತರಗತಿಗೆ ಹೊಸ ಪ್ರವೇಶಕ್ಕಾಗಿ ನೋಂದಣಿಯು ದಿನಾಂಕ 20.03.2026 ರಿಂದ 08.04.2026 ರವರೆಗೆ ಆಫ್‌ಲೈನ್ ನಲ್ಲಿ ಮಾತ್ರ ಪ್ರಾರಂಭವಾಗಿದೆ. 2ನೇ ತರಗತಿಯಿಂದ 5ನೇ ತರಗತಿಗೆ ತಲಾ 40 ಸೀಟುಗಳಿವೆ. 6 ನೇ ತರಗತಿಯಿಂದ 9 ನೇ ತರಗತಿಗೆ ನೋಂದಣಿಯು 02.04.2026 ರಿಂದ 08.04.2026 ರವರೆಗೆ ಆಫ್‌ಲೈನ್ ನಲ್ಲಿ ಪ್ರಾರಂಭಿಸಲಾಗುವುದು, ಖಾಲಿ ಸೀಟುಗಳಿದ್ದರೆ ಮಾತ್ರ.

ಕೇಂದ್ರೀಯ ವಿದ್ಯಾಲಯಕ್ಕೆ ಸಲ್ಲಿಸುವ ಅರ್ಜಿಯಲ್ಲಿ ತಪ್ಪು ಮತ್ತು ದಾರಿ ತಪ್ಪಿಸುವ ಮಾಹಿತಿ ಕಂಡುಬ0ದರೆ, ಪ್ರವೇಶವನ್ನು ನೀಡಲಾಗುವುದಿಲ್ಲ. ಸರಿಯಾಗಿ ಭರ್ತಿ ಮಾಡಿದ ನಮೂನೆಯನ್ನು ಉಡುಪಿಯ ಕೇಂದ್ರೀಯ ವಿದ್ಯಾಲಯದ ಕಚೇರಿಗೆ ಸಲ್ಲಿಸಬೇಕು. 

ಹೆಚ್ಚಿನ ಮಾಹಿತಿಗಾಗಿ ಶಿಕ್ಷಕರಾದ ರಾಗೇಶ್ ಎಂ, ಮೊಬೈಲ್:  7356276009 , ಪ್ರತಿಭಾ ಎಸ್ ಭಟ್ ಮೊಬೈಲ್:  630512878 ಮತ್ತು ದೂರವಾಣಿ ಸಂಖ್ಯೆ: 0820-2950079 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸುವ0ತೆ ಉಡುಪಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article