ವಿಮಾನ ಹಾರಾಟದ ಆತಂಕ ಬೇಡ; ಇದು ಭೂವಿಜ್ಞಾನದ ಸರ್ವೇಕಾರ್ಯ- ಎಸ್ಪಿ ಹರಿರಾಂ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವೈಮಾನಿಕ ಸರ್ವೇ ಕಾರ್ಯ ನಡೆಯುತ್ತಿರುವುದರಿಂದ ಲಘು ವಿಮಾನಗಳು ಹಾರಾಡುತ್ತಿದ್ದು, ಈ ಬಗ್ಗೆ ಆತಂಕಿತರಾಗುವುದು ಬೇಡ ಎಂದು ಉಡುಪಿ ಜಿಲ್ಲಾ ಪೊಲೀಸ್ ಸ್ಪಷ್ಟನೆಯನ್ನು ನೀಡಿದೆ
ಇರಾನ್- ಅಮೇರಿಕಾ- ಇಸ್ರೇಲ್ ಯುದ್ದದ ನಡುವೆ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಮಾನ ಹಾರಾಟ ಬಗ್ಗೆ ಜನ ಆತಂಕಿತರಾಗಿದ್ದರು. ಇದೀಗ ವಿಮಾನ ಸರ್ವೇ ಕಾರ್ಯ ನಡೆಸುತ್ತಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಕೇಂದ್ರ ಸರಕಾರ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೂ ಸಂಪತ್ತಿನ ಸಂಶೋಧನೆ ನಡೆಸುತ್ತಿದ್ದು, ಇದಕ್ಕಾಗಿ ಲಘು ವಿಮಾನದ ಮೂಲಕ ವೈಜ್ಞಾನಿಕ ಸರ್ವೆ ಕಾರ್ಯವನ್ನು ನಡೆಸುತ್ತಿದೆ. ಹೀಗಾಗಿ ಯಾವುದೇ ಆತಂಕ ಬೇಡ ಎಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದ್ದಾರೆ.
ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ಕಡಿಮೆ ಎತ್ತರದಲ್ಲಿ ವಿಮಾನಗಳನ್ನು ಹಾರಾಟ ನಡೆಸಲಾಗುತ್ತಿದೆ. ಈ ಬಗ್ಗೆ ಆತಂಕ ಬೇಡ, ಇದೊಂದು ಕಾನೂನು ಬದ್ಧವಾಗಿದ್ದು, ಸರಕಾರದಿಂದಲೇ ಮಾನ್ಯತೆ ಪಡೆದು ಹಾರಾಟ ನಡೆಸಲಾಗುತ್ತಿದೆ. ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಈ ಮೊದಲೇ ಮಾಹಿತಿ ನೀಡಲಾಗಿದೆ ಎಂದು ತಿಳಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಈ ಸರ್ವೇ ಕಾರ್ಯಕ್ಕೆ ಕೆಸ್ನಾ ಕಾರಾವಾನ್ 208 ಬಿ ಮಾದರಿಯ ಎರಡು ವಿಮಾನ ಬಳಕೆ ಮಾಡಲಾಗುತ್ತಿದೆ.
ಸುಮಾರು 80 ಮೀಟರ್ ಎತ್ತರದಲ್ಲಿ ಗಂಟೆಗೆ ಸುಮಾರು 108 ನಾಟ್ಸ್ ವೇಗದಲ್ಲಿ ಸಂಚಾರ ಮಾಡುತ್ತಿದ್ದು, ಸೂರ್ಯೋದಯ ದಿಂದ ಸಮೀಕ್ಷೆ ಸೂರ್ಯಸ್ತದವರೆಗೂ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.