ಜುಗಾರಿ ಅಡ್ಡೆಗೆ ದಾಳಿ; ನಾಲ್ಕು ಮಂದಿಯ ಬಂಧನ
Tuesday, March 24, 2026
ಸಿದ್ದಾಪುರ ಗ್ರಾಮದ ಮೇಜ್ಜೆಡ್ಡು ಎಂಬಲ್ಲಿನ ಸುಧಾಕರ ಶೆಟ್ಟಿ ಎಂಬವರ ಮನೆಯಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೀಟ್ ಆಡುತ್ತಿದ್ದ ನಾಲ್ಕು ಮಂದಿಯನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಧಾಕರ ಶೆಟ್ಟಿ, ರಮೇಶ್, ಮನೋಹರ, ಮಹೇಶ್ ಬಂಧಿತರು. ಖಚಿತ ಮಾಹಿತಿ ಮೇರೆಗೆ ಕುಂದಾಪುರ ಸಿಪಿಐ ಸಂತೋಷ್. ಎ ಕಾಯ್ಕಿಣಿ್, ಶಂಕರನಾರಾಯಣ ಪೊಲೀಸ್ ಠಾಣಾ ಪಿ.ಎಸ್.ಐ ಅಕ್ಷಯ ಕುಮಾರಿ ಎಸ್.ಎನ್ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ಮಂಜುನಾಥ.ಕೆ, ಹೆಚ್.ಸಿ ರಾಘವೇಂದ್ರ.ಕೆ, ಹೆಚ್.ಸಿ ವಿಕ್ರಮ್, ಪಿ.ಸಿ ಹರೀಶ್.ಜಿ, ಪಿ.ಸಿ ಜಯರಾಮ, ಪಿ.ಸಿ ಪರಶುರಾಮರವರೊಂದಿಗೆ ಸ್ಥಳಕ್ಕೆ ತೆರಳಿದಾಗ ಸುಧಾಕರ ಶೆಟ್ಟಿ ಅವರ ಮನೆ ಹೊರಗಿನ ಆವರಣದಲ್ಲಿ 6 ಜನ ಗಂಡಸರು ಜುಗಾರಿ ಆಟದಲ್ಲಿ ನಿರತರಾಗಿದ್ದರು.
6 ಜನರ ಪೈಕಿ ಇಬ್ಬರು ಮನೆಯ ಕಂಪೌಂಡ್ ಆವರಣವನ್ನು ಹಾರಿಕೊಂಡು ಓಡಿ ತಪ್ಪಿಸಿಕೊಂಡಿದ್ದು ಉಳಿದ 4 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 6,700/- ರೂಪಾಯಿನಗದು , ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ.