ಕರಾವಳಿ ಬೈಪಾಸ್ ಬಳಿ ಬೆಂಕಿ!
Saturday, March 21, 2026
ಉಡುಪಿಯ ಕರಾವಳಿ ಬೈಪಾಸ್ ಬಳಿ ಉಡುಪಿ ಉತ್ಸವ ನಡೆಯುವ ಜಾಗದಲ್ಲಿ ನಿನ್ನೆ ರಾತ್ರಿ ಬೆಂಕಿ ತಗುಲಿದ್ದು, ಸುಮಾರು 2 ಎಕ್ರೆ ಜಾಗಕ್ಕೆ ಹಬ್ಬಿ ಅಪಾಯ ಎದುರಾಗಿತ್ತು. ಕೇವಲ ಒಂದು ಅಗ್ನಿಶಾಮಕ ದಳದ ವಾಹನ ಹಾಗೂ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಅನ್ಸಾರ್ ಅಹಮದ್ ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ.
ಪಕ್ಕದಲ್ಲಿ ಗುಜರಿ ಅಂಗಡಿಯೊಂದಿದ್ದು, ಅಲ್ಲಿಗೆ ಬೆಂಕಿ ಹರಡುವುದನ್ನು ತಪ್ಪಿಸಲಾಗಿದೆ.